ಮುಂದಿನ ವರ್ಷ ಬ್ರಿಟನ್‍ನನ್ನು ಹಿಂದಿಕ್ಕಿ 5ನೇ ಬೃಹತ್ ಆರ್ಥಿಕತೆ ದೇಶವಾಗಲಿದೆ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

India--01

ನವದೆಹಲಿ (ಪಿಟಿಐ), ಆ.30-ಮುಂದಿನ ವರ್ಷ ಭಾರತವು ಬ್ರಿಟನ್‍ನನ್ನು ಹಿಂದಿಕ್ಕಿ ವಿಶ್ವದ ಐದನೇ ಬೃಹತ್ ಆರ್ಥಿಕ ಅಭಿವೃದ್ದಿಯ ದೇಶವಾಗಿ ಹೊರಹೊಮ್ಮಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.   ಈ ವರ್ಷ ಆರ್ಥಿಕ ಅಭಿವೃದ್ದಿ ಗಾತ್ರದಲ್ಲಿ ನಾವು ಫ್ರಾನ್ಸ್‍ನನ್ನು ಹಿಂದಿಕ್ಕಿದ್ದೇವೆ. ಮುಂದಿನ ವರ್ಷ ಬ್ರಿಟನ್‍ಗಿಂತ ನಾವು ಮುಂದೆ ಸಾಗಲಿದ್ದೇವೆ. ಆದ್ದರಿಂದ ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದೇವೆ ಎಂದು ಅವರು ತಿಳಿಸಿದರು.

ಭಾರತಕ್ಕೆ ಹೋಲಿಸಿದರೆ ವಿಶ್ವದ ವಿವಿಧ ದೇಶಗಳ ಆರ್ಥಿಕ ಪ್ರಗತಿ ಕಡಿಮೆ ಮಟ್ಟದಲ್ಲಿದೆ. ನಾವು ವರ್ಷದಿಂದ ವರ್ಷಕ್ಕೆ ಆರ್ಥಿಕ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿದ್ದೇವೆ. ಮುಂದಿನ 10 ರಿಂದ 20 ವರ್ಷಗಳಲ್ಲಿ ವಿಶ್ವದ ಮೂರು ಅತ್ಯುನ್ನತ ಆರ್ಥಿಕ ಬಲಾಢ್ಯ ದೇಶಗಳಲ್ಲಿ ನಾವೂ ಒಬ್ಬರಾಗಲಿದ್ದೇವೆ ಎಂದು ಜೇಟ್ಲಿ ವಿಶ್ವಾಸದಿಂದ ನುಡಿದರು. ಆರ್ಥಿಕ ಅಭಿವೃದ್ದಿಯಲ್ಲಿ ಮುಂದಿನ ವರ್ಷ ಬ್ರಿಟನ್‍ನನ್ನು ಹಿಂದಿಕ್ಕಲಿದೆ ಭಾರತ..! ನವದೆಹಲಿ (ಪಿಟಿಐ), ಆ.30-ಮುಂದಿನ ವರ್ಷ ಭಾರತವು ಬ್ರಿಟನ್‍ನನ್ನು ಹಿಂದಿಕ್ಕಿ ವಿಶ್ವದ ಐದನೇ ಬೃಹತ್ ಆರ್ಥಿಕ ಅಭಿವೃದ್ದಿಯ ದೇಶವಾಗಿ ಹೊರಹೊಮ್ಮಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಈ ವರ್ಷ ಆರ್ಥಿಕ ಅಭಿವೃದ್ದಿ ಗಾತ್ರದಲ್ಲಿ ನಾವು ಫ್ರಾನ್ಸ್‍ನನ್ನು ಹಿಂದಿಕ್ಕಿದ್ದೇವೆ. ಮುಂದಿನ ವರ್ಷ ಬ್ರಿಟನ್‍ಗಿಂತ ನಾವು ಮುಂದೆ ಸಾಗಲಿದ್ದೇವೆ. ಆದ್ದರಿಂದ ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದೇವೆ ಎಂದು ಅವರು ತಿಳಿಸಿದರು.  ಭಾರತಕ್ಕೆ ಹೋಲಿಸಿದರೆ ವಿಶ್ವದ ವಿವಿಧ ದೇಶಗಳ ಆರ್ಥಿಕ ಪ್ರಗತಿ ಕಡಿಮೆ ಮಟ್ಟದಲ್ಲಿದೆ.  ನಾವು ವರ್ಷದಿಂದ ವರ್ಷಕ್ಕೆ ಆರ್ಥಿಕ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿದ್ದೇವೆ. ಮುಂದಿನ 10 ರಿಂದ 20 ವರ್ಷಗಳಲ್ಲಿ ವಿಶ್ವದ ಮೂರು ಅತ್ಯುನ್ನತ ಆರ್ಥಿಕ ಬಲಾಢ್ಯ ದೇಶಗಳಲ್ಲಿ ನಾವೂ ಒಬ್ಬರಾಗಲಿದ್ದೇವೆ ಎಂದು ಜೇಟ್ಲಿ ವಿಶ್ವಾಸದಿಂದ ನುಡಿದರು.

Facebook Comments

Sri Raghav

Admin