ಎನ್‍ಡಿಎ ಹಾಗೂ ಎಐಎಡಿಎಂಕೆ ಸರ್ಕಾರಗಳನ್ನ ಉರುಳಿಸುವುದೇ ಡಿಎಂಕೆ ಗುರಿ : ಸ್ಟಾಲಿನ್

ಈ ಸುದ್ದಿಯನ್ನು ಶೇರ್ ಮಾಡಿ

Stalin--01

ಚೆನ್ನೈ,ಆ.30-ದೇಶವನ್ನು ಸಂಪೂರ್ಣ ಕೇಸರೀಕರಣಗೊಳಿಸಲು ಹೊರಟಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಹಾಗೂ ಬೊಕ್ಕಸವನ್ನು ಬರಿದು ಮಾಡುತ್ತಿರುವ ಎಐಎಡಿಎಂಕೆ ಸರ್ಕಾರಗಳನ್ನು ಉರುಳಿಸುವುದೇ ಡಿಎಂಕೆ ಪಕ್ಷದ ಗುರಿ ಎಂದು ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.  ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ ಎರಡೂ ಸರ್ಕಾರಗಳನ್ನು ಅಧಿಕಾರದಿಂದ ಕಿತ್ತೊಗೆಯುವುದು ತಮ್ಮ ಪಕ್ಷದ ಗುರಿಯಾಗಿದೆ ಎಂದು ಬಿಜೆಪಿ ಮತ್ತು ಎಐಎಡಿಎಂಕೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಎಐಎಡಿಎಂಕೆ ಸರ್ಕಾರದ ಬೊಕ್ಕಸವನ್ನು ಬರಿದು ಮಾಡುತ್ತಿದೆ ಹಾಗೂ ಮತಾಂಧತೆಯನ್ನು ಬಿಜೆಪಿ ಜನರ ಮೇಲೆ ಹೇರುತ್ತಿದೆ. ಈ ಎರಡೂ ಪಕ್ಷಗಳ ಅಧಿಕಾರವನ್ನು ಕಿತ್ತೋಗೆಯ್ಯುವುದೇ ನಮ್ಮ ಪರಮೋಚ್ಚ ಗುರಿ ಎಂದಿದ್ದಾರೆ.  ಒಂದು ಜನಬೆಂಬಲ ಪಡೆದು ಎಐಎಡಿಎಂಕೆ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

Facebook Comments

Sri Raghav

Admin