ಅಮಲಿನಲ್ಲಿ ಜನರ ಮೇಲೆ ಟ್ರಕ್ ನುಗ್ಗಿಸಿದ ಕುಡುಕ, 5 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Trumck
ಮೀರತ್,ಆ.30-ಕುಡಿದ ಅಮಲಿನಲ್ಲಿ ಚಾಲಕನೊಬ್ಬ ಜನರ ಮೇಲೆ ಟ್ರಕ್ ನುಗ್ಗಿಸಿದ್ದರಿಂದ ಐವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಮೀರತ್‍ನ ಟಿಪಿನಗರದಲ್ಲಿ ಘಟನೆ ಜರುಗಿದ್ದು, 100 ಕಿ.ಮೀ. ವೇಗದಲ್ಲಿ ಟ್ರಕ್ ಚಲಾಯಿಸಿಕೊಂಡು ಬಂದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಪಾನಮತ್ತ ಚಾಲಕನ ನಿರ್ಲಕ್ಷ್ಯದಿಂದ ಟ್ರಕ್ ಸಿಕ್ಕ ಸಿಕ್ಕವರ ಮೇಲೆ ಹರಿದಿದ್ದು, ಮೊದಲು ಸ್ಕೂಟರ್‍ಗೆ ಗುದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕ ಯೋಗಿ ಆದಿತ್ಯನಾಥ್ ಸರ್ಕಾರ ತಲಾ   ಲಕ್ಷ ಪರಿಹಾರ ಘೋಷಿಸಿದೆ.

Facebook Comments

Sri Raghav

Admin