ಎಮ್ಮೆ ಕಳ್ಳನೆಂಬ ಶಂಕೆಯಿಂದ ಮತ್ತೊಂದು ದೊಂಬಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Lynched

ಬರೇಲಿ(ಉ.ಪ್ರ.) (ಪಿಟಿಐ), ಆ.30-ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪಿನಿಂದ ನಡೆಯುತ್ತಿರುವ ಹಿಂಸಾಚಾರ ಮತ್ತು ಕೊಲೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದೊಂಬಿ ಹತ್ಯೆ  ಎಮ್ಮೆ ಕಳ್ಳನೆಂಬ ಶಂಕೆಯಿಂದ ಗ್ರಾಮಸ್ಥರ ಗುಂಪೊಂದು 20 ವರ್ಷದ ಯುವಕನೊಬ್ಬನನ್ನು ಮನಸೋ ಇಚ್ಚೆ ಥಳಿಸಿ ಕೊಂದಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.  ಶಾರುಖ್(20) ಗುಂಪು ದಾಳಿಗೆ ಬಲಿಯಾದ ಯುವಕ. ದುಬೈನಲ್ಲಿ ಟೈಲರ್ ಆಗಿದ್ದ ಯುವಕ ಇತ್ತೀಚೆಗಷ್ಟೇ ಗ್ರಾಮಕ್ಕೆ ಹಿಂದಿರುಗಿದ್ದ.  ಈ ಹತ್ಯೆಗೆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Facebook Comments

Sri Raghav

Admin