ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರತದಿಂದ ಚಾಟಿ ಏಟು…!

ಈ ಸುದ್ದಿಯನ್ನು ಶೇರ್ ಮಾಡಿ

Pakisntan--01

ವಿಶ್ವಸಂಸ್ಥೆ (ಪಿಟಿಐ), ಆ.30-ವಿಶ್ವಸಂಸ್ಥೆಯಲ್ಲಿ ಅನಗತ್ಯವಾಗಿ ಕಾಶ್ಮೀರ ವಿಷಯ ಪ್ರಸ್ತಾಪಿಸಿ ಭಾರತದಿಂದ ಆಗಾಗ ವಾಗ್ದಾಳಿಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಇಂದು ಮತ್ತೊಮ್ಮೆ ಬಿಸಿ ಮುಟ್ಟಿಸಲಾಗಿದೆ. ಪಾಕಿಸ್ತಾನ ಹೊಸ ಸರ್ಕಾರವು ವೃಥಾಲಾಪಗಳನ್ನು ಮಾಡದೇ ದಕ್ಷಿಣ ಏಷ್ಯಾ ಪ್ರಾಂತ್ಯವನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸುವತ್ತ ಕಾರ್ಯೋನ್ಮುಖವಾಗಬೇಕು ಎಂದೂ ಇದೇ ವೇಳೆ ಭಾರತ ಸಲಹೆ ಮಾಡಿದೆ.

ವಿವಾದಗಳ ಮಧ್ಯಸ್ಥಿಕೆ ಮತ್ತು ಇತ್ಯರ್ಥ ಕುರಿತು ನಿನ್ನೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್‍ಎಸ್‍ಸಿ) ಸಭೆಯ ಚರ್ಚೆಯಲ್ಲಿ ಮಾತನಾಡಿದ ಸಂಯುಕ್ತ ರಾಷ್ಟ್ರಗಳಿಗೆ ಭಾರತದ ಶಾಶ್ವತ ಪ್ರತಿನಿಧಿ ಮತ್ತು ರಾಯಭಾರಿ ಸೈಯದ್ ಅಕ್ಬರುದ್ದೀನ್ ಈ ಸಲಹೆ ಮಾಡಿದ್ದಾರೆ.

ಪಾಕಿಸ್ತಾನದ ರಾಯಭಾರಿ ಡಾ. ಮಲೀಹಾ ಲೋಧಿ ಚರ್ಚೆ ವೇಳೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದಾಗ ಅಕ್ಬರುದ್ದೀನ್ ದಿಟ್ಟ ಪ್ರತ್ಯುತ್ತರ ನೀಡಿದರು.
ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರವನ್ನು ತನ್ನದೆಂದು ಪಾಕಿಸ್ತಾನ ವೃಥಾ ಆಲಾಪಗಳನ್ನು ಮಾಡುತ್ತಿದೆ. ಇಂಥ ಹೇಳಿಕೆಗಳನ್ನು ಬಿಟ್ಟು ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಲು ಹೊಸ ಸರ್ಕಾರ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಈ ಪ್ರಾಂತ್ಯವನ್ನು ಮುಕ್ತಗೊಳಿಸಿ ಸ್ಥಿರತೆ ಮತ್ತು ಸದೃಢತೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಲಹೆ ಮಾಡಿದರು.

Facebook Comments

Sri Raghav

Admin