ಕೆಆರ್‌ಎಸ್‌ ಅಣೆಕಟ್ಟೆಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾ.ವಿಶ್ವನಾಥಶೆಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

KRS-01

ಶ್ರೀರಂಗಪಟ್ಟಣ, ಆ.31- ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಭೇಟಿ ನೀಡಿ ವೀಕ್ಷಿಸಿದರು. ಜಲಾಶಯದ ಸ್ಥಿತಿ-ಗತಿ,ಸಂಗ್ರಹವಾಗುವ ನೀರು, ಯಾವ ಅವಧಿಯಲ್ಲಿ ಜಲಾಶಯ ಭರ್ತಿಯಾಗುತ್ತದೆ. ಹೀಗೆ ಮುಂತಾದ ವಿವರಗಳನ್ನು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ ಅವರಿಂದ ಪಡೆದರು. ನಂತರ ಬೃಂದಾವನ ಗಾರ್ಡನ್ ವೀಕ್ಷಣೆ ಮಾಡಿ ಕೆಲಕಾಲ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಮರಳಿದರು. ಇದಕ್ಕೂ ಮೊದಲು ತಾಲ್ಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಡಿ.ನಾಗೇಶ್ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಹೂಗುಚ್ಛ ನೀಡಿ ಬರಮಾಡಿಕೊಂಡರು. ಇವರ ಜತೆ ಲೋಕಾಯುಕ್ತ ಕಾರ್ಯದರ್ಶಿ ವಿಜಯಕುಮಾರ್,ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಇದ್ದರು.

Facebook Comments

Sri Raghav

Admin