ನಾದಿನಿಯನ್ನು ರೇಪ್ ಮಾಡಿದ ಆರೋಪಿಗೆ 10 ವರ್ಷ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Jail--014

ಮೈಸೂರು,ಆ.31- ಅಪ್ರಾಪ್ತ ನಾದಿನಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪೋಸ್ಕೊ ವಿಶೇಷ ನ್ಯಾಯಾಲಯ 10 ವರ್ಷ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕೆ.ಆರ್.ನಗರದ ಮಾಯಿಗೌಡನ ಹಳ್ಳಿಯ ಮಹದೇವ ಶಿಕ್ಷೆಗೊಳಗಾದ ವ್ಯಕ್ತಿ.  ನಗರದ ಕೂಟಗಳ್ಳಿ ಕೈಗಾರಿಕಾ ಪ್ರದೇಶದ ಸಿಮೆಂಟ್ ಇಟ್ಟಿಗೆ ಕಾರ್ಖಾನೆಯ ಭದ್ರತಾ ಸಿಬ್ಬಂದಿ ವಸತಿ ಗೃಹದಲ್ಲಿ ಈತ ವಾಸವಾಗಿದ್ದನು. 2015, ಮಾರ್ಚ್ 20ರಂದು ಈತನ ನಾದಿನಿ ಮನೆಗೆ ಬಂದಿದ್ದಾಗ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಬಾಲಕಿಯ ದೈಹಿಕ ಬೆಳವಣಿಗೆ ಬಗ್ಗೆ ಅನುಮಾನಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಈಕೆ ಗರ್ಭಿಣಿ ಎಂಬುದನ್ನು ವೈದ್ಯರು ತಿಳಿಸಿದ್ದಾರೆ. ಈ ವಿಷಯ ತಿಳಿದು ಆಘಾತಗೊಂಡ ಪೋಷಕರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ ನಡೆದ ಘಟನೆಯನ್ನು ತಿಳಿಸಿದ್ದಾಳೆ.
ಈ ಸಂಬಂಧ ಬಾಲಕಿ ಪೋಷಕರು ವಿಜಯನಗರ ಠಾಣೆಗೆ ಅಳಿಯನ ವಿರುದ್ಧ ದೂರು ನೀಡಿದ್ದರು.

ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.  ವಿಚಾರಣೆ ನಡೆಸಿದ ಪೊಸ್ಕೋ ನ್ಯಾಯಾಲಯ ನ್ಯಾಯಾಧೀಶರಾದ ಜಯಶ್ರೀ ಅವರು ಆರೋಪಿಗೆ 10 ವರ್ಷ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು.

Facebook Comments

Sri Raghav

Admin