ಏಷ್ಯನ್ ಗೇಮ್ಸ್’ನಲ್ಲಿ ಭಾರತೀಯ ಮಹಿಳಾ ಸ್ಕ್ವಾಶ್ ತಂಡ ಫೈನಲ್‍ಗೆ

ಈ ಸುದ್ದಿಯನ್ನು ಶೇರ್ ಮಾಡಿ

Asian-Games

ಜಕಾರ್ತ (ಪಿಟಿಐ), ಆ.31-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‍ನ 13ನೇ ದಿನವಾದ ಇಂದು ವಿವಿಧ ಕ್ರೀಡೆಗಳಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಭಾರತೀಯ ಮಹಿಳಾ ಸ್ಕ್ವಾಶ್ ತಂಡ ಹಾಲಿ ಚಾಂಪಿಯನ್ ಮಲೇಷ್ಯಾವನ್ನು ಮಣಿಸಿ ಫೈನಲ್ ತಲುಪಿದೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

ಜೋಷ್ನಾ ಚಿನ್ನಪ್ಪ, ದೀಪಿಕಾ ಪಿಲ್ಲಿಲಕ್ ಕಾರ್ತಿಕ್, ಸುನಯನ ಕುರುವಿಲ್ಲಾ ಮತ್ತು ತಾನ್ವಿ ಖನ್ನಾ ಅವರನ್ನು ಒಳಗೊಂಡ ತಂಡವು ಬಲಿಷ್ಠ ಮಲೇಷ್ಯಾ ವನಿತೆಯರನ್ನು 2-0ರಿಂದ ಮಣಿಸಿತು. ಫೈನಲ್ ಪ್ರವೇಶಿಸಿರುವ ಭಾರತೀಯ ತಂಡ ಚಿನ್ನ ಅಥವಾ ಬಂಗಾರದ ಪದಕ ಗೆಲ್ಲುವ ಆಸೆ ಮೂಡಿಸಿದೆ.
ಇಂದು ಸಂಜೆ ನಡೆಯುವ ಸೆಮಿ ಫೈನಲ್ಸ್‍ನಲ್ಲಿ ಭಾರತೀಯ ಪುರುಷರ ಸ್ಕ್ವಾಶ್ ತಂಡವು ಬಲಿಷ್ಠ ಹಾಂಕಾಂಗ್ ವಿರುದ್ಧ ಸೆಣಸಲಿದೆ.

Facebook Comments

Sri Raghav

Admin