ದೇವೇಗೌಡರನ್ನು ಭೇಟಿಯಾದ ಬ್ರಿಟಿಷ್ ಹೈಕಮೀಷನರ್

ಈ ಸುದ್ದಿಯನ್ನು ಶೇರ್ ಮಾಡಿ

Devegowda

ಬೆಂಗಳೂರು,ಆ.31- ಬ್ರಿಟಿಷ್ ಹೈಕಮೀಷನರ್ ಡೊನಾಲ್ಡ್ ಮೈಕ್ ಅ ಲಿಸ್ಟರ್ ಅವರು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಸಮಾಲಚೋನೆ ನಡೆಸಿದರು. ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದರು. ನಂತರ ಮಾತನಾಡಿದ ಬ್ರಿಟಿಷ್ ಹೈಕಮೀಷನರ್, ಇದೊಂದು ಸೌಜನ್ಯದ ಭೇಟಿಯಾಗಿದ್ದು, ಜೆಡಿಎಸ್ ಪಕ್ಷದ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಪಡೆಯಲು ಗೌಡರನ್ನು ಭೇಟಿಯಾಗಿದ್ದಾಗಿ ತಿಳಿಸಿದರು.  ದೇವೇಗೌಡರು ತಮ್ಮ ಅನುಭವವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಸಂತೋಷವಾಯಿತು ಎಂದು ತಿಳಿಸಿದರು.

Facebook Comments

Sri Raghav

Admin