ದೇಶದ್ರೋಹ ಪ್ರಕರಣ ಕುರಿತು ಕಾನೂನು ಆಯೋಗ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

satition

ನವದೆಹಲಿ, ಆ.31-ಅಸ್ತಿತ್ವದಲ್ಲಿರುವ ಸರಕಾರದ ನೀತಿಯೊಂದಿಗೆ ಹೊಂದಾಣಿಕೆಯಾಗದ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಯಾರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಬಾರದು ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ. ದೇಶದ್ರೋಹದ ಕಾನೂನು (ಐಪಿಸಿಯ 124ಎ) ಬಗೆಗಿನ ಸಲಹಾ ವರದಿಯಲ್ಲಿ ನಿವೃತ್ತ ಜಸ್ಟಿಸ್ ಬಿ.ಎ.ಎಸ್. ಚೌಹಾಣ್ ನೇತೃತ್ವದ ಕಾನೂನು ಆಯೋಗವು, ಹಿಂಸೆ ಮತ್ತು ಅಕ್ರಮ ಮಾರ್ಗಗಳ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಉದ್ದೇಶ ಹೊಂದಿದ ಕೃತ್ಯಗಳ ವಿಚಾರದಲ್ಲಿ ಮಾತ್ರ ಕಠಿಣ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಹೇಳಿದೆ.

ಕಾನೂನು ತಜ್ಞರು, ಸಂಸದರು, ಸರಕಾರ, ಸರಕಾರೇತರ ಸಂಸ್ಥೆಗಳು, ಶೈಕ್ಷಣಿಕ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಆರೋಗ್ಯಕರ ಚರ್ಚೆ ನಡೆದು ದೇಶದ್ರೋಹ ಕಾನೂನಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ನೇಹಿ ತಿದ್ದುಪಡಿ ತರುವ ಬಗ್ಗೆ ಯೋಚಿಸಬಹುದಾಗಿದೆ ಎಂದು ಆಯೋಗ ಹೇಳಿದೆ.

ಜನರಿಗೆ ತಮ್ಮದೇ ವಿಧದಲ್ಲಿ ತಮ್ಮ ದೇಶದ ಬಗ್ಗೆ ಪ್ರೀತಿ ತೋರಿಸುವ ಸ್ವಾತಂತ್ರ್ಯ ಇರಬೇಕಿದೆ. ಇದಕ್ಕಾಗಿ ಒಬ್ಬ ವ್ಯಕ್ತಿ ಉತ್ತಮ ಉದ್ದೇಶದೊಂದಿಗೆ ಟೀಕೆ ಅಥವಾ ಚರ್ಚೆ ನಡೆಸಬಹುದು ಇಲ್ಲವೇ ಸರಕಾರದ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳನ್ನು ಎತ್ತಿಹಿಡಿಯಬಹುದು. ಅದಕ್ಕೆ ದೇಶದ್ರೋಹವೆಂಬ ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೇಜವಾಬ್ದಾರಿಯುತವಾಗಿ ಪ್ರಯೋಗಿಸುವ ಪ್ರತಿಯೊಂದು ಕ್ರಮವನ್ನೂ ದೇಶದ್ರೋಹವೆಂದು ಬಣ್ಣಿಸಲಾಗದು ಎಂದು ಆಯೋಗ ತಿಳಿಸಿದೆ.

Facebook Comments

Sri Raghav

Admin