ಸುರೇಶ್‍ಗೌಡರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದವನ ವಿರುದ್ಧ ಎಸ್ಪಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Tumakuru-sp
ತುಮಕೂರು, ಆ.31- ಸಾಮಾಜಿಕ ಜಾಲತಾಣದಲ್ಲಿ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರನ್ನು ಕೊಲೆ ಮಾಡುವುದಾಗಿ ಮುಖಪುಟ (ಫೇಸ್‍ಬುಕ್)ದಲ್ಲಿ ಬೆದರಿಕೆ ಹಾಕಿರುವವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಅರ್ಜಿ ನೀಡಲಾಗಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಗೂಳೂರು ಶಿವಕುಮಾರ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೂಳೂರು ಶಿವಕುಮಾರ್, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಒಮ್ಮೆ ಮೈಸೂರ್ ಪೇಪರ್ ಮಿಲ್ಸ್‍ನ ಚೇರ್ಮನ್ ಆಗಿ ಪ್ರಸ್ತುತ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾಗಿರುವ ಮಾಜಿ ಶಾಸಕ ಬಿ.ಸುರೇಶ್‍ಗೌಡರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಡಿ.ಸಿ.ಗೌರಿಶಂಕರ ಅವರ ಬೆಂಬಲಿಗ ಎಂದು ಗುರುತಿಸಿಕೊಂಡಿರುವ (ಪ್ರವೀಣ್ ಸೌಮ್ಯ) ಎಂಬಾತ (ರಂಗನಾಥ ಗೌಡ್ರು) ಎಂಬುವವರು ಆಗಸ್ಟ್ 25ರಂದು ತಮ್ಮ ಮುಖಪುಟದಲ್ಲಿ ಹಾಲಿ ಶಾಸಕ ಗೌರಿಶಂಕರ ಅವರ ಸುದ್ದಿಗೋಷ್ಠಿಯನ್ನು ಪೋಸ್ಟ್ ಮಾಡಿದ್ದಾನೆ ಎಂದು ಹೇಳಿದರು.

ಬಿ.ಸುರೇಶ್‍ಗೌಡರು ಈ ಸಮಾಜದ ಆಸ್ತಿ. ಸಮಾಜಕ್ಕಾಗಿ ಹಗಲು-ಇರುಳು ಕೆಲಸ ಮಾಡಿರುವ ನಿಸ್ವಾರ್ಥ ವ್ಯಕ್ತಿ. ಇಲ್ಲಿ ಎರಡು ಬಾರಿ ಶಾಸಕರಾಗಿರುವ ಸುರೇಶ್‍ಗೌಡರಿಗೇ ಈ ರೀತಿ ಕೊಲೆ ಬೆದರಿಕೆ ಇರುವಾಗ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನ ಪಾಡೇನು ಎಂದು ಪ್ರಶ್ನಿಸಿದರು. ಇಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ನಾವು ಇದನ್ನು ಉಗ್ರವಾಗಿ ಪ್ರತಿಭಟಿಸುತ್ತೇವೆ. ಸೆ.5ರೊಳಗೆ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 5 ಸಾವಿರ ಜನರನ್ನು ಸೇರಿಸಿ ಪ್ರತಿಭಟಿಸಲಾಗುವುದು ಎಂದು ಜಿಪಂ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಎಚ್ಚರಿಸಿದರು.

Facebook Comments

Sri Raghav

Admin