ಇರಾಮ್ ಹಬೀಬ್‍ ಕಾಶ್ಮೀರದ ಮೊದಲ ಮುಸ್ಲಿಂ ಮಹಿಳಾ ಪೈಲಟ್

ಈ ಸುದ್ದಿಯನ್ನು ಶೇರ್ ಮಾಡಿ

Muslimm

ಶ್ರೀನಗರ, ಆ.31 – ಕಾಶ್ಮೀರದ ಮೊದಲ ಮುಸ್ಲಿಂ ಏರ್‍ಪೈಲಟ್ ಎಂಬ ಕೀರ್ತಿಗೆ ಇರಾಮ್ ಹಬೀಬ್ ಭಾಜನರಾಗಿದ್ದಾರೆ. ಮುಂದಿನ ತಿಂಗಳು ಖಾಸಗಿ ವಿಮಾನದ ಪೈಲಟ್ ಆಗಿ ಹಬೀಬ್ ಕಾರ್ಯನಿರ್ವಹಿಸಲಿದ್ದಾರೆ.  2016ರಲ್ಲಿ ತನ್ವೀರೈನಾ ಕಾಶ್ಮೀರದ ಮೊದಲ ಪೈಟ್ ಆಗಿ ಗುರುತಿಸಿಕೊಂಡರೆ, ಕಳೆದ ಏಪ್ರಿಲ್‍ನಲ್ಲಿ ಅಯೇಷಾ ಅಜೀಜ್ (21) ಕಾಶ್ಮೀರದ ಅತ್ಯಂತ ಕಿರಿಯ ಪೈಲಟ್ ಆಗಿದ್ದಾರೆ. ಚಿಕ್ಕಂದಿನಿಂದಲೂ ಫಾರೆಸ್ಟ್ರಿಯಲ್ಲಿ ಡಾಕ್ಟರೇಟ್ ಮಾಡಬೇಕೆಂಬ ಕನಸನ್ನು ಹೊತ್ತುಕೊಂಡಿದ್ದರಾದರೂ ಹಬೀಬ್ ಪೈಲಟ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಹಬೀಬ್ ಅವರ ತಂದೆಯು ಕಾಶ್ಮೀರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಸರಬರಾಜು ಮಾಡುತ್ತಾರೆ.

Facebook Comments

Sri Raghav

Admin