ಶ್ರೀ ಕಟ್ಟೆಮನೆ ಮಹಾಲಕ್ಷ್ಮಿ ದೇವಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

nirmalananda--katte-mane-ma
ಬೆಂಗಳೂರು, ಆ.31- ದೊಡ್ಡಬಳ್ಳಾಪುರ ತಾಲೂಕು, ದೊಡ್ಡಬೆಳವಂಗಲ ಹೋಬಳಿ, ಚಿಕ್ಕಬೆಳವಂಗಲ ಕ್ಷೇತ್ರದಲ್ಲಿ ಶ್ರೀ ಕಟ್ಟೆ ಮನೆ ಮಹಾಲಕ್ಷ್ಮಿ ಅಮ್ಮನವರ ಮತ್ತು ಶ್ರೀ ಗಣಪತಿ ಹಾಗೂ ನಾಗದೇವತಾ ನೂತನ ದೇವಾಲಯ ಲೋಕಾರ್ಪಣೆ, ವಿಮಾನ ಗೋಪುರ ಹಾಗೂ ಕಳಶ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

kattemane-maha-lakshimi

ಆ.29ರಿಂದ ವಿವಿಧ ಧಾರ್ಮಿಕ ಕಾರ್ಯಗಳು, ಹೋಮಾದಿ ಕಾರ್ಯಗಳನ್ನು ನಿನ್ನೆವರೆಗೆ ನೆರವೇರಿಸಲಾಯಿತು. ಇಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ, ಸುಪ್ರಭಾತ ಸೇವೆ, ನಿತ್ಯಾರಾಧನೆ, ಧೇನು ದರ್ಶನ, ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಮೂರ್ತಿ ಹೋಮ ಹಾಗೂ ಶುಭಲಗ್ನದಲ್ಲಿ ಪೂರ್ಣಾಹುತಿಯನ್ನು ನೆರವೇರಿಸಲಾಯಿತು. ತದನಂತರ ಲಘು ಅಲಂಕಾರ, ಕುಂಭಾಭಿಷೇಕ, ವಿಶೇಷ ಅಲಂಕಾರ ಸೇವಾ ಕಾಲ, ಸಾಮೂಹಿಕ ಸಂಕಲ್ಪ ಪೂರ್ವಕ ಅಷ್ಟೋತ್ತರ ಸೇವೆ, ಮಹಾಮಂಗಳಾರತಿ ಮಾಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

kattemane-maha-lakshimi-1

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಉದ್ಘಾಟನಾ ಸಮಾರಂಭ ನೆರವೇರಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಧ್ಯಕ್ಷತೆ ವಹಿಸಿದ್ದರು. ಸಂಸದ ವೀರಪ್ಪಮೊಯ್ಲಿ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಶ್ರೀಮತಿ ರಂಗಮ್ಮ ತಿಮ್ಮಯ್ಯ , ಮಾಜಿ ಶಾಸಕರಾದ ಆರ್.ಜಿ.ವೆಂಕಟಾಚಲಯ್ಯ, ವಿ.ಕೃಷ್ಣಪ್ಪ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವಕೀಲ ಸಿ.ಎಚ್.ಹನುಮಂತರಾಯ, ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಮುನೇಗೌಡ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Facebook Comments