ನಿಮ್ಗೆ ಬೇರೆ ಕೆಲಸ ಇಲ್ವಾ..?’ : ಕಣ್ಸನ್ನೆ ಹುಡುಗಿ ಮೇಲೆ ಕೇಸ್ ಹಾಕಿದವರಿಗೆ ಕೋರ್ಟ್ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Priya-Wariar

ಮುಂಬೈ, ಆ. 31- ಒರಿ ಅದರ್ ಲವ್ ಸಿನಿಮಾದ ಹಾಡಿನಲ್ಲಿ ಕಣ್ಸನ್ನೆ ಮೂಲಕ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಮಲಯಾಳಂ ಕಣ್ಸನ್ನೆ ಬೆಡಗಿ ಪ್ರಿಯಾ ಗೆ ಇಂದು ಬಿಗ್ ರಿಲೀಫ್ ದೊರೆತಿದೆ. ಈಕೆಯ ವಿರುದ್ಧ ಹೂಡಲಾಗಿದ್ದ ಎಫ್‍ಐಆರ್ ಹಾಗೂ ಪೊಲೀಸ್ ಕೇಸನ್ನು ಇಂದು ರದ್ದುಗೊಳಿಸುವ ಮೂಲಕ ಈ ಬೆಡಗಿಗೆ ನಿರಾಳತೆ ಸಿಕ್ಕಿದೆ.

ಪ್ರಿಯಾ ವಾರಿಯರ್ ನಟಿಸಿದ್ದ ಒರು ಅದರ್ ಲವ್ ಚಿತ್ರದಲ್ಲಿ ಆಕೆ ನಟನೊಬ್ಬನಿಗೆ ಕಣ್ಣು ಹೊಡೆಯುವ ದೃಶ್ಯವು ಇಡೀ ದೇಶದಲ್ಲೇ ಸಂಚಲನ ಮೂಡಿಸಿತ್ತು.
ಈ ಹಾಡಿನ ಮೂಲಕ ಪ್ರವಾದಿ ಮೊಹಮ್ಮದ್‍ರ ಪತ್ನಿಗೆ ಪರೋಕ್ಷವಾಗಿ ಅವಮಾನ ಮಾಡಲಾಗಿದೆ ಎಂದು ಹೈದರಾಬಾದ್‍ನ ಯುವಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್‍ಮಿಶ್ರಾ ನೇತೃತ್ವದ ಪೀಠ ಯಾವುದೋ ಸಿನಿಮಾದಲ್ಲಿ ಯಾರೋ ಹಾಡು ಹಾಡುತ್ತಾರೆ, ಇದನ್ನೇ ದೊಡ್ಡದು ಮಾಡುತ್ತೀರಾ ನಿಮಗೆ ಬೇರೆ ಕೆಲಸವಿಲ್ಲವೇ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

ಈ ಪ್ರಕರಣದ ಸಂಬಂಧ ಇನ್ನು ಮುಂದೆ ಯಾವುದೇ ಎಫ್‍ಐಆರ್ ಸಲ್ಲಿಸುವುದು ಹಾಗೂ ವಿವಾದವನ್ನು ಹುಟ್ಟುಹಾಕುವುದು ಬೇಡ ಎಂದು ಪೀಠವು ಸಲಹೆ ಮಾಡಿತ್ತು. ಇದರಿಂದ ಚಿತ್ರದ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರ ವಿರುದ್ಧ ಹೈದರಾಬಾದ್ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಕೂಡ ಸುಪ್ರೀಂ ತಳ್ಳಿ ಹಾಕಿದೆ. ಸುಪ್ರೀಂಕೋರ್ಟ್ ತಮ್ಮ ವಿರುದ್ಧ ಪೊಲೀಸ್ ಪ್ರಕರಣ ಹಾಗೂ ಎಫ್‍ಐಆರ್ ಅನ್ನು ರದ್ದುಪಡಿಸಿರುವುದಕ್ಕೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸಂತಸ ವ್ಯಕ್ತಪಡಿಸಿದ್ದಾರೆ.

Facebook Comments