ಐಟಿ ರಿಟರ್ನ್ಸ್’ಗೆ ಇಂದು ಕೊನೆ ದಿನ, ಆದಾಯ ವಿವರ ಸಲ್ಲಿಸಿದ 5 ಕೋಟಿ ಮಂದಿ..!

ಈ ಸುದ್ದಿಯನ್ನು ಶೇರ್ ಮಾಡಿ

IT-Return--01

ನವದೆಹಲಿ (ಪಿಟಿಐ), ಆ.31-ತೆರಿಗೆ ವಿವರ (ಐಟಿ ರಿಟನ್ರ್ಸ್) ಸಲ್ಲಿಸಲು ಇಂದು ಕೊನೆ ದಿನ. ವೇತನ ವರ್ಗದ ಉದ್ಯೋಗಿಗಳು, ಉದ್ಯಮಿಗಳು ಹಾಗೂ ವೃತ್ತಿಪರರು ತಮ್ಮ ಆದಾಯ ವಿವರಗಳನ್ನು ಸಲ್ಲಿಸುತ್ತಿದ್ದಾರೆ. ನಿನ್ನೆ ಸಂಜೆವರೆಗೆ ಐಟಿ ಮಾಹಿತಿ ಸಲ್ಲಿಕೆಯಲ್ಲಿ ಶೇ.60ರಷ್ಟು ಏರಿಕೆ ಕಂಡುಬಂದಿದ್ದು, ಐದು ಕೋಟಿ ಜನರು ರಿಟರ್ನ್ಸ್ ಗಳನ್ನು ಫೈಲ್ ಮಾಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಐಟಿ-ಸಲ್ಲಿಕೆಯಲ್ಲಿ ಶೇ.60ರಷ್ಟು ಹೆಚ್ಚಳ ಕಂಡುಬಂದಿದ್ದು, ಇದು ಐದು ಕೋಟಿ ಮಟ್ಟವನ್ನು ದಾಟಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.   ನಿರೀಕ್ಷೆಗೂ ಮೀರಿ ಐಟಿ ಸಲ್ಲಿಕೆಯಾಗಿರುವುದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹಣ ಸಲ್ಲಿಕೆಯಾಗಿದ್ದು, ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕಡೆದಿನಕ್ಕೆ ಮುನ್ನವಾದ ನಿನ್ನೆ(ಗುರುವಾರ) 20 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಕೊನೆ ದಿನವಾದ ಇಂದು ಅಧಿಕ ಸಂಖ್ಯೆಯ ತೆರಿಗೆ ಪಾವತಿದಾರರು ತಮ್ಮ ಆದಾಯ/ವರಮಾನದ ವಿವರಗಳನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂದಿತು.
ಕಳೆದ ವರ್ಷ ಒಟ್ಟು 6.8 ಕೋಟಿ ಮಂದಿ ಐಟಿ ರಿಟನ್ರ್ಸ್ ಸಲ್ಲಿಸಿದ್ದರು. ಈ ವರ್ಷ ಆ ಸಂಖ್ಯೆಯಲ್ಲಿ ಹೆಚ್ಚಳವಾಗಲಿದ್ದು, ನಾಳೆ ಸ್ಪಷ್ಟ ಚಿತ್ರಣ ಲಭಿಸಲಿದೆ.

Facebook Comments

Sri Raghav

Admin