ಶಿವನಸಮುದ್ರದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

lady-Dead
ಮಳವಳ್ಳಿ, ಸೆ.1- ತಾಲ್ಲೂಕಿನ ಶಿವನಸಮುದ್ರ(ಬ್ಲಫ್) ಸಮೀಪದ ಸಿಎಚ್‍ಎ ಪವರ್ ಹೌಸ್ ವಾಟರ್ ಗೇಟ್ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು , ಕಳೆದ ಒಂದು ವಾರದಲ್ಲಿ ಪತ್ತೆಯಾದ ಮೂರನೇ ಶವ ಇದಾಗಿದೆ, ಕಾವೇರಿ ನದಿ ನೀರಿನ ಪ್ರವಾಹದಲ್ಲಿ ಅಪರಿಚಿತ ಮಹಿಳೆಯ ಶವ ಕೊಚ್ಚಿಕೊಂಡು ಬಂದಿದ್ದು, ಮಹಿಳೆಯ ಕಣ್ಣು, ಮುಖವನ್ನು ಜಲಚರಗಳು ತಿಂದುಹಾಕಿವೆ, ಮಹಿಳೆ ಕಪ್ಪು ಜರ್ಕಿನ್ ಹಾಗೂ ಹಳದಿ ಮತ್ತು ಹಸಿರು ಬಣ್ಣದ ಚೂಡಿದಾರ್ ತೊಟ್ಟಿದ್ದು ಕತ್ತಿನಲ್ಲಿ ಕರಿಮಣಿ ಸರ ಇದೆ. ಮೃತಳ ಗುರುತು ಪತ್ತೆಯಾಗಿಲ್ಲ. ಅದಕಾರಣ ಮಹಿಳೆಯ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು , ಈ ಸಂಬಂಧ ಬೆಳಕವಾಡಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ಮೃತರ ವಾರಸುದಾರರಿದ್ದಲ್ಲಿ ಕೊಡಲೇ ಬೆಳಕವಾಡಿ ಪೂಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ. ದೂ.ಸಂ: 08231240034ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ತಿಳಿಸಿದ್ದಾರೆ.

Facebook Comments

Sri Raghav

Admin