ಸೇನೆಗಾಗಿ 6.5 ಲಕ್ಷ ಅತ್ಯಾಧುನಿಕ ರೈಫಲ್ ಖರೀದಿ ಪ್ರಕ್ರಿಯೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Aramy-rifles
ನವದೆಹಲಿ, ಸೆ.1-ಭಾರತೀಯ ಸೇನೆಯನ್ನು ಮತ್ತಷ್ಟ ಬಲಗೊಳಿಸಲು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ(ಎಂಒಡಿ) ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿ ಯೋಧರಿಗಾಗಿ 6.5 ಲಕ್ಷ ಅತ್ಯಾಧುನಿಕ ಅಸಲ್ಟ್ ರೈಫಲ್‍ಗಳ(ಆಕ್ರಮಣಕಾರಿ ಬಂದೂಕುಗಳು) ಖರೀದಿ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ. ಈ ಕ್ರಮದಿಂದಾಗಿ ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

300 ಮೀಟರ್‍ಗಳ ದೂರದಲ್ಲಿರುವ ವೈರಿಗಳನ್ನು ಕೊಲ್ಲುವ ಸಾಮಥ್ರ್ಯ(ಕಿಲ್ ರೇಂಜ್) ಇರುವ 7.6್ಡ239 ಚದರ ಮಿ.ಮೀ. ಕ್ಯಾಲಿಬ್ರೆ ಅಸಲ್ಟ್ ರೈಫಲ್‍ಗಳನ್ನು ಹೊಂದಲು ಮಾಹಿತಿಗಾಗಿ ಮನವಿ(ಆರ್‍ಎಫ್‍ಐ)ಯನ್ನು ಸಚಿವಾಲಯವು ಸಲ್ಲಿಸಿತ್ತು. ಹೊಸ ಮಾದರಿಯ ರೈಫಲ್‍ಗಳನ್ನು ಶಸ್ತ್ರಾಸ್ತ್ರ ತಯಾರಿಕಾ ಕೈಗಾರಿಕೆ ಮಂಡಳಿಯಿಂದ ತಯಾರಿಸಲಾಗುತ್ತಿದೆ. ಇಡೀ ಪ್ರಕ್ರಿಯೆ ಖರೀದಿ ಮತ್ತು ತಯಾರಿಕೆ(ಭಾರತೀಯ) ಅಡಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ಆರ್ಡಿನನ್ಸ್ ಫ್ಯಾಕ್ಟರಿ ಮಂಡಳಿಯಿಂದ ತಯಾರಿಸಲಾಗಿದ್ದ ಸುಮಾರು 8 ಲಕ್ಷ ಇನ್‍ಸಾಸ್ ರೈಫಲ್‍ಗಳನ್ನು ಬದಲಿಸಲು ಸೇನೆ ಉದ್ದೇಶ ಹೊಂದಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.  ಭಾರತೀಯ ಸೇನೆಯ ಮುಂಚೂಣಿ ಇನ್‍ಫೆಂಟ್ರಿ (ಪದಾತಿದಳ) ಯೋಧರಿಗೆ ಶತ್ರುಗಳ ನಿಗ್ರಹದಲ್ಲಿ ಈ ರೈಫಲ್‍ಗಳು ನೆರವಾಗಲಿದೆ. ಈ ಹಿಂದೆ ರಕ್ಷಣಾ ಸಚಿವಾಲಯವು ಕಲಾಶ್ನಿಕೋವ್ ಎಕೆ-103 ರೈಫಲ್‍ಗಳನ್ನು ಖರೀದಿಸಲು ಮುಂದಾಗಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರದ ಮೇಕ್-ಇನ್-ಇಂಡಿಯಾ ಉಪಕ್ರಮವನ್ನು ಸಾಕಾರಗೊಳಿಸಲು ದೇಶೀಯ ನಿರ್ಮಿತ ಅತ್ಯಾಧುನಿಕ ರೈಫಲ್‍ಗಳ ಖರೀದಿಗೆ ಮುಂದಾಗಿದೆ.

Facebook Comments

Sri Raghav

Admin