ಕಾಣೆಯಾಗಿದ್ದ ಚರ್ಚ್‍ನ ಸಿಸ್ಟರ್ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

sucaide-1
ಬೆಂಗಳೂರು, ಸೆ.1-ಚರ್ಚ್‍ನ ಸಿಸ್ಟರ್ ಒಬ್ಬರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‍ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರ್ತೂರು ಚರ್ಚ್‍ನಲ್ಲಿ ನೆಲೆಸಿದ್ದ ಕೋಲ್ಕತ್ತಾ ಮೂಲದ ಎಲಿಜಬೆತ್ (30) ಆತ್ಮಹತ್ಯೆ ಮಾಡಿಕೊಂಡ ಸಿಸ್ಟರ್.  ನಾಲ್ಕು ತಿಂಗಳ ಹಿಂದೆ ಕೋಲ್ಕತ್ತಾದಿಂದ ಬಂದು ವರ್ತೂರು ಚರ್ಚ್‍ನಲ್ಲಿ ಅವರು ನೆಲೆಸಿದ್ದರು. ಎರಡು ದಿನಗಳ ಹಿಂದೆ ಅವರು ಕಾಣೆಯಾಗಿದ್ದರು. ನಿನ್ನೆ ಸಂಜೆ ವರ್ತೂರು ಕೋಡಿಯ ಮರದ ಕೊಂಬೆಯಲ್ಲಿ ಅವರ ಮೃತದೇಹ ನೇತಾಡುತ್ತಿದ್ದುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದರು.

ಸ್ಥಳಕ್ಕೆ ಧಾವಿಸಿದ ವೈಟ್‍ಫೀಲ್ಡ್ ಪೊಲೀಸರು ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ಸಾಗಿಸಿದ್ದಾರೆ.  ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin