ಇಂದಿನ ಪಂಚಾಗ ಮತ್ತು ರಾಶಿಫಲ (01-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ವ್ಯರ್ಥವಾಗಿ ವಾದಕ್ಕಿಳಿಯಬಾರದು. ಅಪ್ರಾರ್ಥಿತನಾಗಿ ಒಳ್ಳೆಯದನ್ನು ಮಾಡ ಬೇಕು. ಕಾಮ, ದುಡುಕು, ದ್ವೇಷಗಳಿಂದ ಧರ್ಮವನ್ನೆಂದಿಗೂ ತ್ಯಜಿಸಬಾರದು.  -ಮಹಾಭಾರತ

Rashi
ಪಂಚಾಂಗ : 01.09.2018 ಶನಿವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ರಾ.10.47 / ಚಂದ್ರ ಅಸ್ತ ಬೆ.11.23
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಷಷ್ಠೀ (ರಾ.09.45) / ನಕ್ಷತ್ರ: ಭರಣಿ (ರಾ.09.02)
ಯೋಗ: ಧೃವ (ಸಾ.06.11) / ಕರಣ: ಗರಜೆ-ವಣಿಜ್ (ಬೆ.10.02-ರಾ.09.45)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 16

ಇಂದಿನ ವಿಶೇಷ:  ಶ್ರಾವಣ ಶನಿವಾರ

# ರಾಶಿ ಭವಿಷ್ಯ
ಮೇಷ : ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ
ವೃಷಭ : ಅನಿರೀಕ್ಷಿತ ಧನಲಾಭದಿಂದ ಸಂತೋಷ ಇಮ್ಮಡಿಯಾಗಲಿದೆ. ವಿದೇಶ ಪ್ರಯಾಣ ಯೋಗ
ಮಿಥುನ: ಅಪಘಾತ ಭಯ ನಿಮ್ಮನ್ನು ಕಾಡಲಿದೆ
ಕಟಕ : ವಿವಾಹದ ಬಗ್ಗೆ ಮಾತುಕತೆ ನಡೆಯಲಿದೆ
ಸಿಂಹ: ಸಾಲ ಕೊಟ್ಟವರು ಇಂದೇ ಕೊಡಿ ಎಂದು ಪೀಡಿಸಬಹುದು
ಕನ್ಯಾ: ವ್ಯಾಪಾರ ಹೆಚ್ಚುವುದ ರೊಂದಿಗೆ ದಾನ ಮಾಡುವ ಮನಸ್ಸು ಬರುತ್ತದೆ
ತುಲಾ: ವಿದ್ಯಾರ್ಥಿಗಳಿಗೆ ಶುಭದಿನ. ಶುಭವಾರ್ತೆ ಯೊಂದು ಕಿವಿಗೆ ಬೀಳಲಿದೆ
ವೃಶ್ಚಿಕ: ಕೆಲವರು ಬೇಕೆಂತಲೇ ನಿಮ್ಮ ಉತ್ಸಾಹ ಕುಗ್ಗಿಸುವ ಪ್ರಯತ್ನ ಮಾಡುವರು
ಧನುಸ್ಸು: ಒಳ್ಳೆಯ ಕೆಲಸ ಪ್ರಾರಂಭಿಸಿದ್ದರೂ ಅದರ ಶ್ರೇಯಸ್ಸು ನಿಮಗೆ ದಕ್ಕದೆ ಇರಬಹುದು
ಮಕರ: ವಿಶೇಷ ಅತಿಥಿಗಳಿಂದ ಧನಲಾಭವಾಗಲಿದೆ
ಕುಂಭ: ಸಂಬಂಧಗಳಲ್ಲಿ ಸ್ವಲ್ಪ ಏರುಪೇರು ಆಗಬಹುದು
ಮೀನ: ಒಂದೊಂದು ಸೆಕೆಂಡ್ ಕೂಡ ಮುಖ್ಯವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin