ವೀಸಾ ವಂಚನೆ ಪ್ರಕರಣದಲ್ಲಿ ಭಾರತದ ಸಿಇಒ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Visa--1

ನ್ಯೂಯಾರ್ಕ್, ಸೆ.1-ವೀಸಾ ವಂಚನೆ ಪ್ರಕರಣದ ಸಂಬಂಧ ಅಮೆರಿಕದಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಭಾರತೀಯ ಸಂಜಾತ ಪ್ರದ್ಯುಮ್ನ ಕುಮಾರ್ ಸಮಲ್ ಅವರನ್ನು ಬಂಧಿಸಲಾಗಿದೆ. 200 ವಿದೇಶಿ ಉದ್ಯೋಗಿಗಳಿಗಾಗಿ ಎಚ್1ಬಿ ರೀತಿಯ ವೀಸಾಗಳನ್ನು ಪಡೆಯಲು ಸಮಲ್(49) ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಬಹು ವರ್ಷಗಳ ವೀಸಾ ಪಡೆದಿದ್ದರು ಎಂಬ ಆರೋಪವಿದೆ. ಈ ಸಂಬಂಧ ಸಿಯಾಟಲ್ ವಿಮಾನನಿಲ್ದಾಣದಲ್ಲಿ ಅವರನ್ನು ಅಧಿಕಾರಿಗಳು ಬಂಧಿಸಿದರು.

ವಂಚನೆ : ಭಾರತೀಯ ಮಹಿಳೆಗೆ ಜೈಲು
ಆರೋಗ್ಯ ಆರೈಕೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ಮೂಲದ ಮಹಿಳೆಗೆ ಅಮೆರಿಕದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಲಾಸಿನಿ ಗಣೇಶ್(47) ಅವರನ್ನು ಆಟಾರ್ನಿ ಜನರಲ್ ಅಲೆಕ್ಸ್ ಸೇ ಅವರು 63 ತಿಂಗಳ ಸೆರೆಮನೆ ವಾಸ ಶಿಕ್ಷೆ ವಿಧಿಸಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿಯಾದ ವಿಲಾಸಿನಿ, ಆರೋಗ್ಯ ಆರೈಕ್ ಪ್ರಯೋಜನ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸಿ ವಂಚಿಸಿದ್ದರು ಎಂಬ ಆರೋಪ ಇತ್ತು.

Facebook Comments

Sri Raghav

Admin