‘ಚೈನೀಸ್ ಗಾಂಧಿ’ ಎಂದ ಬಿಜೆಪಿಗೆ ‘ಕೈಲಾಸ’ದಿಂದಲೇ ಟಾಂಗ್ ಕೊಟ್ಟ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01
ಕಠ್ಮಂಡು, ಸೆ.1- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆ ವೇಳೆಯೂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ತಾವು ಚೀನಾ ಮಾರ್ಗದ ಮೂಲಕ ಯಾತ್ರೆ ಕೈಗೊಳ್ಳುವ ಬಗ್ಗೆ ಬಿಜೆಪಿ ವ್ಯಂಗ್ಯವಾಗಿ ಟೀಕಿಸಿರುವುದಕ್ಕೆ ಪ್ರತಿಯಾಗಿ ರಾಹುಲ್ ಟಾಂಗ್ ನೀಡಿದ್ದಾರೆ.

ತಮ್ಮ ಈ ಪವಿತ್ರ ಯಾತ್ರೆಯ ಮೊದಲ ಚರಣದಲ್ಲಿ ನಿನ್ನೆ ತಡರಾತ್ರಿ ನೇಪಾಳ ರಾಜಧಾನಿ ಕಠ್ಮಂಡು ತಲುಪಿರುವ ಅವರು ತಮಸೋಮಾ ಜ್ಯೋತಿರ್ಗಮಯಾ ಶ್ಲೋಕವನ್ನು ಟ್ವೀಟ್ ಮಾಡಿದ್ದಾರೆ. ಚೀನಾ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ರಾಹುಲ್ ಗಾಂಧಿ, ಚೈನೀಸ್ ಮ್ಯಾನ್ ಆಗಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ನಿನ್ನೆಯಷ್ಟೇ ಲೇವಡಿ ಮಾಡಿ, ನೀವು ಚೈನೀಸ್ ಗಾಂಧಿಯೋ ರಾಹುಲ್ ಗಾಂಧಿಯೋ ಎಂದು ಪ್ರಶ್ನಿಸಿದ್ದರು.
ಬಿಜೆಪಿಯ ಟೀಕೆಗೆ ಉತ್ತರವೆಂಬಂತೆ, ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್‍ನಲ್ಲಿ ಭಗವಾನ್ ಶಿವನ ಪವಿತ್ರ ದಿವ್ಯ ಸನ್ನಿಧಿಯ ತಾಣವಾಗಿರುವ ಕೈಲಾಸ ಪರ್ವತದ ಚಿತ್ರವನ್ನು ಕೂಡ ಹಾಕಿದ್ದಾರೆ. ಜತೆಗೆ ಸಂಸ್ಕøತದ ಪ್ರಸಿದ್ಧ ಅಸತೋಮಾ ಸದ್ಗಮಯಾ ಎಂಬ ಶ್ಲೋಕದ ಸಾಲನ್ನು ಕೂಡ ಬರೆದಿದ್ದಾರೆ. ಅಸತ್ಯದಿಂದ ಸತ್ಯದೆಡೆಗೆ ನಮ್ಮನ್ನು ನಡೆಸೆಂದು ದೇವರಲ್ಲಿ ಮಾಡುವ ಪ್ರಾರ್ಥನೆ ಇದಾಗಿದೆ.

ರಾಹುಲ್ ಕಠ್ಮಂಡುವಿನಿಂದ ವಿಮಾನದಲ್ಲಿ ನೇಪಾಳ್ ಗಂಜ್‍ಗೆ ಪ್ರಯಾಣಿಸಿ ಅಲ್ಲಿಂದ ಟಿಬೆಟ್ ಗಡಿ ಸಮೀಪದಲ್ಲಿರುವ ಹಮ್ಲಾ ತಾಣಕ್ಕೆ ವಾಯು ಮಾರ್ಗವಾಗಿ ಪ್ರಯಾಣಿಸುವರು ಎಂದು ಮೂಲಗಳು ತಿಳಿಸಿವೆ. ಈ ವರ್ಷ ಏಪ್ರಿಲ್‍ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ತಾನು ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷಕ್ಕೆ ಗುರಿಯಾದಾಗ ಅದು ಪತನಗೊಳ್ಳುವ ಸಂಭವನೀಯ ದುರಂತದಿಂದ ರಾಹುಲ್ ಅದೃಷ್ಟವಶಾತ್ ಪಾರಾಗಿ ಬದುಕುಳಿದಿದ್ದರು. ಸಾವಿಗೆ ಅತ್ಯಂತ ಸನಿಹಕ್ಕೆ ತಲುಪಿ ಅಲ್ಲಿಂದ ಮರಳಿದ ಪವಾಡ ಸದೃಶ ಅನುಭವದ ಕಾರಣ ರಾಹುಲ್ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಸಂಕಲ್ಪ ತಳೆದಿದ್ದರು. ಅದನ್ನು ಈಗ ಅವರು ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Facebook Comments

Sri Raghav

Admin