ಅನಾರೋಗ್ಯದಿಂದ ಬಳಲುತ್ತಿದ್ದ ಜೈನ ಮುನಿ ತರುಣ್ ಸಾಗರ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Tarun-Sagar--01

ನವದೆಹಲಿ, ಸೆ.1 (ಪಿಟಿಐ)- ಜೈನ ಮುನಿ ತರುಣ್ ಸಾಗರ್ (51) ದೀರ್ಘಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ದೆಹಲಿಯಲ್ಲಿ ನಿಧನರಾದರು. ಕಾಮಾಲೆ ರೋಗ ಮತ್ತು ಇತರ ಅನಾರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಮಧ್ಯಪ್ರದೇಶದ ದಹೋಹ್ ಜಿಲ್ಲೆಯಲ್ಲಿ 1967ರ ಜೂನ್ 26ರಂದು ಜನಿಸಿದ್ದ ಅವರ ಮೂಲ ಹೆಸರು ಪವನ್ ಕುಮಾರ್ ಜೈನ್. 1981ರಲ್ಲಿ ಮನೆ ಮತ್ತು ಕುಟುಂಬ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದರು. ಅವರು ದಿಗಂಬರ ಜೈನ ಸನ್ಯಾಸಿಯಾಗಿದ್ದರು. ಜೈನ ಸಮುದಾಯದ ಅಪಾರ ಅನುಯಾಯಿಗಳನ್ನು ಅವರು ಹೊಂದಿದ್ದರು. ಜೈನಮುನಿ ತರುಣ್ ಸಾಗರ್ 2016ರಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಮಾಡಿದ ಪ್ರವಚನವೊಂದು ತೀವ್ರ ವಿವಾದಕ್ಕೂ ಕಾರಣವಾಗಿತ್ತು.

ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ವಾರಗಳ ಹಿಂದೆ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಗಿನ ಜಾವ 3 ಗಂಟೆಗೆ ಅವರು ಕೊನೆಯುಸಿರೆಳೆದರು. ಪೂರ್ವ ದೆಹಲಿಯ ಕೃಷ್ಣನಗರ ಪ್ರದೇಶದಲ್ಲಿರುವ ರಾಧಾಪುರಿ ಜೈನ ದೇವಸ್ಥಾನದಲ್ಲಿ ಅವರು ಆಶ್ರಮ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರ ಉತ್ತಾರಾ ಪ್ರದೇಶದ ಮುರುಧ್ ನಗರದ ತರುಣ್ ಸಾಗರಂ ಪ್ರದೇಶದಲ್ಲಿ ನಡೆಯಲಿದೆ.

ಸಂತಾಪ:
ಜೈನಮುನಿ ತರುಣ್ ಸಾಗರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ದಿಗಂಬರ ಜೈನ ಸನ್ಯಾಸಿ ನೀಡಿರುವ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ.

Facebook Comments

Sri Raghav

Admin