“ಸೈರಾ ನರಸಿಂಹ ರೆಡ್ಡಿ” ಚಿತ್ರದಲ್ಲಿ ಕಿಚ್ಚನ ಲುಕ್’ಗೆ ಅಭಿಮಾನಿಗಳು ಫಿದಾ

ಈ ಸುದ್ದಿಯನ್ನು ಶೇರ್ ಮಾಡಿ

Sudeep--01
ಕಿಚ್ಚನ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ಸುದೀಪ್ ಹೊಸ ಅವತಾರವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇಡೀ ಭಾರತದಾದ್ಯಂತ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಮಲ್ಟಿಸ್ಟಾರ್ ಗಳ ಸಂಗಮದಲ್ಲಿ ಸಿದ್ಧವಾಗುತ್ತಿರುವ “ಸೈರಾ ನರಸಿಂಹ ರೆಡ್ಡಿ” ಚಿತ್ರದ ಕಿಚ್ಚ ಸುದೀಪ್ ರ ಪ್ರಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಉದ್ದನೆ ಕೂದಲು, ರಗಡ್ ಮೀಸೆ, ಕಪ್ಪು ಬಟ್ಟೆ, ಕೈಯಲ್ಲೊಂದು ಆಯುಧ ಹಿಡಿದಿರುವ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರ ಹುಟ್ಟುಹಬ್ಬಕ್ಕೆ ಈ ಒಂದು ಮೋಷನ್ ಪೋಸ್ಟರ್ ಟಾಲಿವುಡ್ ನ ಚಿತ್ರತಂಡದಿಂದ ಪ್ರೀತಿಯ ಉಡುಗರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ರಾಮ್ ಚರಣ್ ನಿರ್ಮಾಣದಲ್ಲಿ ಸುರೇಂದ್ರ ರೆಡ್ಡಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಮೆಗಾಸ್ಟಾರ್ ಚಿರಂಜೀವಿ , ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ , ಜಗಪತಿಬಾಬು, ನಯನತಾರಾ, ತಮನ್ನಾ, ಕಿಚ್ಚ ಸುದೀಪ್, ವಿಜಯ್ ಸೇತುಪತಿ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.

“ಸೈರಾ ನರಸಿಂಹ ರೆಡ್ಡಿ” ಚಿತ್ರ ಸ್ವಾತಂತ್ಯ ಹೋರಾಟಗಾರ ‘ಸೈರಾ ನರಸಿಂಹ ರೆಡ್ಡಿ’ ಅವರ ಜೀವನ ಆಧರಿತ ಚಿತ್ರಕಥೆಯಾಗಿದ್ದು, ಇದರಲ್ಲಿ ನರಸಿಂಹ ರೆಡ್ಡಿಗೆ ಸಹಾಯ ಮಾಡುವ ರಾಜನಾಗಿ ಸುದೀಪ್ ಬಣ್ಣ ಹಚ್ಚಿದ್ದಾರಂತೆ ಎನ್ನಲಾಗುತ್ತಿದೆ. ಇನ್ನುಳಿದಂತೆ, ಚಿರಂಜೀವಿ, ಸುದೀಪ್ ಜೊತೆಯಲ್ಲಿ ನಯನತಾರ, ವಿಜಯ ಸೇತುಪತಿ, ಅಮಿತಾಬ್ ಬಚ್ಚನ್, ಹುಮಾ ಖುರೇಶಿ, ಜಗಪತಿ ಬಾಬು, ತಮನ್ನಾ ಕೂಡ ಈ ಚಿತ್ರದಲ್ಲಿ ಇದ್ದಾರೆ.

Facebook Comments

Sri Raghav

Admin