ಎರಡು ಕಡೆ ಮತ ಪಟ್ಟಿಯಲ್ಲಿ ಎಂಎಲ್‌ಸಿ ನಾರಾಯಣಸ್ವಾಮಿ ಹೆಸರು : ಕಾಂಗ್ರೆಸ್’ನಿಂದ ಇಸಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

eC-BK-hari
ಬೆಂಗಳೂರು, ಸೆ.1- ವಿಧಾನಪರಿಷತ್‍ನ ಬಿಜೆಪಿ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಅವರ ಹೆಸರು ಎರಡು ಮತಗಟ್ಟೆಗಳಲ್ಲಿ ನೋಂದಣಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮುಖಂಡರಾದ ಎಸ್.ಮನೋಹರ್, ಶೇಖರ್, ಹೇಮರಾಜ್ ಮುಂತಾದವರು ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿ ವೈ.ಎ.ನಾರಾಯಣಸ್ವಾಮಿ ಅವರು ಎರಡು ಜಿಲ್ಲೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ತ್ಯಾಗರಾಜ ಬಡಾವಣೆಯ ಕ್ರಮ ಸಂಖ್ಯೆ 1311 ಮತಗಟ್ಟೆ ಸರ್ಕಾರಿ ವಿಶ್ವವಿದ್ಯಾಲಯ ನಂ.2, ಶ್ರೀನಿವಾಸಪುರ ಟೌನ್. ಮತ್ತೊಂದು ಕ್ರಮ ಸಂಖ್ಯೆ 1095 ಮತಗಟ್ಟೆ ಸಂಖ್ಯೆ 3 ಗೋಪಾಲರಾಯನ ಸರ್ಕಾರಿ ಶಾಲೆ ಇಲ್ಲೂ ಸಹ ಇವರ ಹೆಸರು ನೋಂದಣಿಯಾಗಿದೆ. ಮೂರು ವರ್ಷದಲ್ಲಿ ಮೂರು ಭಾರಿ ಸ್ಪರ್ಧಿಸಿರುವ ಅವರು, ಎರಡು ಜಿಲ್ಲೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದು ಆರೋಪಿಸಿರುವ ಇವರು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Facebook Comments

Sri Raghav

Admin