ನೆಹಾಲ್ ಚುಡಾಸಮಗೆ ಮಿಸ್ ದಿವಾ ಕಿರೀಟ : ವಿಶ್ವಸುಂದರಿ ಸ್ಪರ್ಧೆಗೆ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Nehal--01

ಮುಂಬೈ, ಸೆ.1 (ಪಿಟಿಐ)- ಮುಂಬೈನ ರೂಪರಾಶಿ ನೆಹಾಲ್ ಚೂಡಾಸಮ ಯಮಹಾ ಫ್ಯಾಸಿನೋ ಮಿಸ್ ದಿವಾ-2018 ಕಿರೀಟ ಮುಡಿಗೇರಿಸಿದ್ದಾರೆ. ಇದರೊಂದಿಗೆ ವಿಶ್ವ ಸುಂದರಿ-2018 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಾಣಿಜ್ಯ ನಗರಿ ಮುಂಬೈನ ಎನ್‍ಎಸ್‍ಸಿಐ ಡೋಮ್‍ನಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜತ ಗ್ಯಾನ್ ಫಿನಾಲೆ ಸ್ಟರ್ಧೆಯಲ್ಲಿ ನೆಹಾಲ್ ಮಿಸ್ ದಿವಾ ಮಿಸ್ ಯೂನಿವರ್ಸ್-2018 ಕಿರೀಟ ಧರಿಸಿ ಸಂಭ್ರಮಿಸಿದರು. ಈ ವರ್ಷಾಂತ್ಯದಲ್ಲಿ ಥೈಲೆಂಡ್ ರಾಜಧಾನಿ ಬ್ಯಾಂಕಾಂಕ್‍ನಲ್ಲಿ ನಡೆಯಲಿರುವ ವಿಶ್ವಸುಂದರೆ-2018 ಸ್ಫರ್ಧೆಯಲ್ಲಿ ಆಯ್ಕೆಯಾಗಿದ್ದಾರೆ.

ಬಾಲಿವುಡ್ ಮೋಹಕ ನಟ ಸುಶಾಂತ್ ಸಿಂಗ್ ರಜಪೂತ್ ನೆಹಾಲ್ ಮಿಸ್ ದಿವಾ-2018 ಆಯ್ಕೆಯನ್ನು ಪ್ರಕಟಿಸುತ್ತಿದ್ದಂತೆ ಸಂಭ್ರಮದ ಸನ್ನಿವೇಶ ಅಲ್ಲಿ ಮೇಳೈಸಿತ್ತು. 2017ರ ಮಿಸ್ ದಿವಾ ವಿಜೇತೆ ಶ್ರದ್ಧಾ ಶಶಿಧರ್, ನೆಹಾಲ್ ಚೂಡಾಸಮ ಅವರಿಗೆ ಕಿರೀಟ ತೊಡಿಸಿ ಅಭಿನಂದಿಸಿದರು.  21 ವರ್ಷದ ನೆಹಾಲ್ ಫಿಟ್ನೆಸ್, ಅಥ್ಲೆಟಿಕ್ಸ್, ನೃತ್ಯ ಮತ್ತು ಅಡುಗೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದು ಈ ಶೋಡಷಿಯ ನಂಬಿಕೆ.

Nehal--02

# ಇತರ ಪ್ರಶಸ್ತಿ ಪುರಸ್ಕೃತರು :
ಜೈಪುರದ ಸುಂದರೆ ಅದಿತಿ ಹುಡಿಯಾ ಯಮಹಾ ಫ್ಯಾಸಿನೋ ಮಿಸ್ ದಿವಾ ಸುಪ್ರಾ ನ್ಯಾಷನಲ್ 2018 ಪ್ರಶಸ್ತಿ ಮುಡಿಗೇರಿಸಿದರು. ಲಕ್ನೋದ ರೂಪಸಿ ರೋಷ್ನಿ ಶಿಯೊರನ್ ಸೆಕೆಂಡ್ ರನ್ನರ್ ಅಫ್ ಪ್ರಶಸ್ತಿ ಪಡೆದರು.  ಬಾಲಿವುಡ್ ತಾರೆಯರಾದ ಸುಶಾಂತ್ ಸಿಂಗ್ ರಜಪೂತ್, ಶಿಲ್ಪಾ ಶೆಟ್ಟಿ, ನೇಹಾ ಧುಪಿಯಾ, ಲಾರಾ ದತ್ತ, ಹಾಗೂ 2017ರ ಭುವನ ಸುಂದರಿ ಡೆಮಿ ಲೀಗ್ ನೆಲ್ ಪೀಟರ್ಸ್ ತೀರ್ಪುಗಾರರ ಮಂಡಲಿಯಲ್ಲಿದ್ದರು.

Facebook Comments

Sri Raghav

Admin