ದಸರಾ ಆನೆ ಮತ್ತು ಮಾವುತರ ವಾಸಕ್ಕೆ ಅರಮನೆ ಆವರಣದಲ್ಲಿ 8 ಶೆಡ್ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Dasara

ಮೈಸೂರು,ಸೆ.1- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳು, ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗಾಗಿ ಅರಮನೆ ಆವರಣದಲ್ಲಿ ಶೆಡ್‍ಗಳನ್ನು ನಿರ್ಮಿಸಲಾಗಿದೆ.  ಅರಮನೆ ಆವರಣದಲ್ಲಿ ಎಂಟು ಶೆಡ್‍ಗಳನ್ನು ನಿರ್ಮಿಸಲಾಗಿದೆ. ಆನೆಗಳು, ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರ ಅನುಕೂಲಕ್ಕಾಗಿ ಶೆಡ್‍ಗಳನ್ನು ನಿರ್ಮಿಸಲಾಗಿದ್ದು, ಮಳೆ-ಬಿಸಿಲಿನಿಂದ ರಕ್ಷಣೆ ಸಿಗಲಿದೆ.  ಮಾವುತರು, ಕಾವಾಡಿಗಳ ಮಕ್ಕಳಿಗಾಗಿ ತಾತ್ಕಾಲಿಕ ಪಾಠಶಾಲೆಯನ್ನು ತೆರೆಯಲಾಗಿದ್ದು, ನಗರದಲ್ಲಿರುವವರಿಗೆ ಊಟ, ತಿಂಡಿ, ವಸತಿ ಸೇರಿದಂತೆ ಅತ್ಯಗತ್ಯ ಎಲ್ಲಾ ಸಾಮಾಗ್ರಿಗಳನ್ನು ಜಿಲ್ಲಾಡಳಿತ ನೀಡಲಿದೆ.

Facebook Comments

Sri Raghav

Admin