ಕಾಡಂಚಿನ ಹೊಲ-ಗದ್ದೆಗಳನ್ನು ನಾಶ ಮಾಡುತ್ತಿದ್ದ ಆನೆಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Elephant
ಕನಕಪುರ, ಸೆ.1- ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ರೈತರ ಹೊಲ- ಗದ್ದೆಗಳನ್ನು ತುಳಿದು ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಅರಣ್ಯ ಪ್ರದೇಶದ ಬಳಿ ಬೀಡು ಬಿಟ್ಟಿರುವ ಪುಂಡಾನೆಗಳನ್ನು ಹಿಡಿಯಲು ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪನವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲೆ ದುಬಾರೆ ಆನೆ ಕ್ಯಾಂಪ್‍ನಿಂದ ಐದು ಆನೆಗಳನ್ನು ತರಿಸಿ ಅವುಗಳ ಮೂಲಕ ಬೀಡು ಬಿಟ್ಟಿರುವ ಆನೆಗಳನ್ನು ಹಿಡಿಯುವುದು ಮೂಲ ಉದ್ದೇಶವಾಗಿದೆ.  ತಾಲ್ಲೂಕಿನ ಸಂಗಮ, ಮುತ್ತತ್ತಿ, ಮೇಕೆದಾಟು, ಸಾತನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಆನೆ ಹಾವಳಿ ತಪ್ಪಿಸಲು ರೈತರು ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ತಂಡ ರಚನೆ ಮಾಡಿ ಸಾತನೂರು ಹೋಬಳಿ, ಹಲಸಿನಮರ ದೊಡ್ಡಿ, ಸಾಸಲಾಪುರ, ಕಂಚನಹಳ್ಳಿ, ಕಬ್ಬಾಳು, ಸಿಂಗರಾಜಪುರ, ಶಾನು ಭೋಗನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳ ಶೋಧಕ್ಕೆ ಕಾರ್ಯಾಚರಣೆ ಪ್ರಾರಂಭಿಸಲಾಯಿತು.

ಕೊಡಗು ಜಿಲ್ಲೆ ದುಬಾರೆ ಆನೆ ಕ್ಯಾಂಪ್‍ನಿಂದ ಕರೆ ತಂದ 5 ಆನೆಗಳನ್ನು ಕಬ್ಬಾಳಮ್ಮ ದೇಗುಲದ ಬಳಿ ಪೂಜೆ ಸಲ್ಲಿಸಿದ ಬಳಿಕ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.  ಅರಣ್ಯ ಇಲಾಖೆಯ ಡಿಸಿಎಫ್ ವೆಂಕಟೇಶ್, ದಿನೇಶ್ ಸ್ವಾಮಿ, ನಾಯಕ್ ರಾಜು, ದೇವರಾಜು, ತಿಪ್ಪೇಸ್ವಾಮಿ, ರಿಜ್ವಾನ್, ಕಾಂತರಾಜ್, ಗೋಪಾಲ್, ರಾಮಚಂದ್ರು, ಶಿವಾನಂದ ಚಿನ್ನಗಿರಿ, ಬಸವಸ್ವಾಮಿ, ಮುತ್ತುರಾಜ್ ಮತ್ತು ಅನೇಕ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Facebook Comments

Sri Raghav

Admin