ಬೀದಿ ನಾಯಿಗಳ ಸಂರಕ್ಷಣೆಗೆ ನಟಿ ಸಂಯುಕ್ತ ಹೊರನಾಡು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Samyukta-Horanadu-1
ಬೆಂಗಳೂರು, ಸೆ.1- ಬೆಂಗಳೂರಿನ ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರು ಮುಂದಾಗಬೇಕು ಎಂದು ನಟಿ ಹಾಗೂ ಪ್ರಾಣಿ ಸಂರಕ್ಷಣಾ ಹಕ್ಕುಗಳ ಕಾರ್ಯಕರ್ತೆ ಸಂಯುಕ್ತ ಹೊರನಾಡ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಮಹಾತ್ಮ ಗಾಂಧಿ ರಸ್ತೆಯ ಛಾಯಾ ಕಲಾ ಮಂದಿರದಲ್ಲಿ ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟಬಲ್ ಟ್ರಸ್ಟ್(ಎಸ್.ಒ.ಎ.ಸಿ.ಟಿ) ಏರ್ಪಡಿಸಿದ್ದ ಎಂಪ್ಯಾಶನ್ ಕೃತಿ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Samyukta-Horanadu

ಎಂಪ್ಯಾಶನ್ ಕಾಫಿ ಟೇಬಲ್ ಪುಸ್ತಕವು ಸುಜಾಯ ಎನ್. ಜಗದೀಶ್ ಅವರು ರಚಿಸಿದ್ದು, ಈ ಕೃತಿಯಲ್ಲಿ ಪ್ರಾಣಿಗಳ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್‍ನಿಂದ ರಕ್ಷಿಸಲ್ಪಟ್ಟ 20 ಬೀದಿ ನಾಯಿಗಳ ನೈಜ ಕಥೆಗಳನ್ನು ಒಳಗೊಂಡಿದೆ. ಅಲ್ಲದೇ ಆ ನಾಯಿಗಳನ್ನು ಯಾವ ರೀತಿ ರಕ್ಷಿಸಲಾಯಿತು ಎಂದು ಕಲಾವಿದೆ ಸಂಧ್ಯಾ ಕೆ. ಶಿರಸಿ ಅವರು ವರ್ಣಚಿತ್ರಗಳ ಮೂಲಕ ಮನಮುಟ್ಟುವಂತೆ ಚಿತ್ರಿಸಿದ್ದಾರೆ.  ಸುಜಾಯ ಮತ್ತು ಸ್ವಯಂಸೇವಕರು ಅನೇಕ ಪ್ರಾಣಿಗಳನ್ನು ಸಂರಕ್ಷಿಸಿದ ಪ್ರಯತ್ನಗಳನ್ನು ಮೆಚ್ಚುತ್ತೇನೆ. ಅಲ್ಲದೇ ನಾಯಿಗಳ ಭಾವನೆಗಳನ್ನು ಕಲಾತ್ಮಕವಾಗಿ ಸಂಧ್ಯಾ ಅವರು ಚಿತ್ರಿಸಿರುವುದು ಬಹಳ ಖುಷಿ ನೀಡಿದೆ. ಇಂತಹ ಪ್ರಯತ್ನಗಳಿಗೆ ಎಲ್ಲರ ಬೆಂಬಲದ ಅವಶ್ಯಕತೆ ಇದೆ. ಸ್ವಯಂ ಸೇವಕರು ಹೆಚ್ಚು ಹೆಚ್ಚು ಮುಂದೆ ಬಂದು ನಾಯಿಗಳನ್ನು ಸಂರಕ್ಷಿಸಬೇಕು ಎಂದು ಸಂಯುಕ್ತ ಮನವಿ ಮಾಡಿದರು.

ಸಾಮಾಜಿಕ ಮಾಧ್ಯಮಗಳು ಸಹ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ಮಾಡಬೇಕೆಂದರು. ಈ ಪ್ರದರ್ಶನವು ಪ್ರಾಣಿ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಿದೆ, ಸಾಕುಪ್ರಾಣಿಗಳ ಬಗ್ಗೆ ಇರುವ ಕಾನೂನುಗಳು ಮತ್ತು ಸ್ವಯಂಸೇವಕರ ಅವಶ್ಯಕತೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುತ್ತಿದೆ ಎಂದು ಹೇಳಿದರು. ಛಾಯಾಚಿತ್ರ ಪ್ರದರ್ಶನವು ಸೆಪ್ಟೆಂಬರ್ 2 ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಇರುತ್ತದೆ. ಈ ವೇಳೆ ಕೃಷಿ ವಿಜ್ಞಾನಿ ಡಾ. ಮಂಜುನಾಥ್, ಕಲಾವಿದೆ ಸಂಧ್ಯಾ ಕೆ.ಶಿರಸಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin