ವಂಚಕ ಚೋಕ್ಸಿ ಹಸ್ತಾಂತರಕ್ಕೆ ಶುರುವಾಗಿದೆ ಕಾನೂನು ಪ್ರಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

PNB-Bank-Choksi

ಸೆಂಟ್‍ಜಾನ್, ಸೆ.1- ಭಾರತದ ಪಂಜಾಬ್ ಬ್ಯಾಂಕ್‍ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ ತಲೆ ಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತಂತೆ ಕಾನೂನು ಪ್ರಕ್ರಿಯೆ ಆರಂಭವಾಗಿದೆ.  ಭಾರತದ ಕೋರಿಕೆ ಮೇರೆಗೆ ಹಸ್ತಾಂತರ ಕುರಿತಂತೆ ಆ್ಯಂಟಿಗೋ ಹಾಗೂ ಬರ್ಬುಡದ ಉನ್ನತಾಧಿಕಾರಿಗಳು ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ. ಕಾನೂನಿನ ವ್ಯಾಪ್ತಿಯಲ್ಲಿ ಮೆಹುಲ್ ಚೋಕ್ಸಿ ಯನ್ನು ಹಸ್ತಾಂತರ ಮಾಡುವ ಬಗ್ಗೆ ನಾವು ಕಾನೂನು ತಜ್ಞರ ಸಲಹೆ ಪಡೆಯಲಿದ್ದೇವೆ. ಒಂದು ವೇಳೆ ಹಸ್ತಾಂತರ ಮಾಡಲು ಅವಕಾಶವಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಂಟಿಗುವಾ ಮತ್ತು ಬರ್ಬುಡದ ಅರ್ಟಾನಿ ಜನರಲ್ ಸ್ಟೆಡ್ರಾಯ್ ಬೆನ್ಜಮಿನ್ ಹೇಳಿದ್ದಾರೆ.

ನಾವು ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಭಾರತದ ಸಿಬಿಐ ಅಧಿಕಾರಿಗಳು ನಮಗೆ ದಾಖಲೆಗಳನ್ನು ಹಸ್ತಾಂತರ ಮಾಡಿದ್ದಾರೆ. ಅದನ್ನು ಹಸ್ತಾಂತರ ಮಾಡಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.  ನಾವು ಕಾನೂನು ತಜ್ಞರಿಗೆ ಭಾರತ ನೀಡಿರುವ ದಾಖಲೆಗಳನ್ನು ಹಸ್ತಾಂತರ ಮಾಡಿದ್ದೇವೆ. ಅವರು ಪರಿಶೀಲನೆ ನಡೆಸಿ ಸಲಹೆ ನೀಡಿದ ಮೇಲೆ ಸೋಮವಾರದೊಳಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ.

ಭಾರತ ಮತ್ತು ನಮ್ಮ ದೇಶದ ನಡುವೆ ಒಪ್ಪಂದವಾಗಿರುವುದರಿಂದ ಯಾವುದೇ ರೀತಿಯ ಕಾನೂನು ಅಡ್ಡಿಯಾಗುವುದಿಲ್ಲ. ಅಲ್ಲದೆ ಆ್ಯಂಟಿಗುವಾ ಮತ್ತು ಬರ್ಬುಡ ಇಂಟರ್ಪೋಲ್ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಹಸ್ತಾಂತರಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.  ಗಯಾನದಲ್ಲಿರುವ ಭಾರತದ ಹೈಕಮೀಷನರ್ ವೆಂಕಟಾಚಲಂ ಮಹಾಲಿಂಗಂ ಅವರು ಸೆಂಟ್‍ಜಾನ್‍ಗೆ ಭೇಟಿ ನೀಡಿ ಹಸ್ತಾಂತರ ಮಾಡುವಂತೆ ಕೋರಿದ್ದಾರೆ. ಈಗಾಗಲೇ ಪ್ರಧಾನಿ ಗೆಸ್ಟರ್ನ್ ಬ್ರೋನೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ನಾವು ಕೂಡ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದ್ದಾರೆ.

ಭಾರತಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ. ಒಂದು ವೇಳೆ ಮೆಹಬೂಬ್ ಚೋಕ್ಸಿ ವಂಚನೆ ಮಾಡಿರುವುದು ಸಾಬೀತಾದರೆ ಗಡಿಪಾರು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ನಮ್ಮ ದೇಶ ಅಪರಾಧಿಗಳಿಗೆ ಸ್ಥಳ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಪಂಜಾಬ್‍ನ ನ್ಯಾಷನಲ್ ಬ್ಯಾಂಕ್‍ಗೆ ವಂಚನೆ ಮಾಡಿರುವ ನೀರವ್ ಮೋದಿಯ ಚಿಕ್ಕಪ್ಪ ಮೆಹುಲ್ ಚೋಕ್ಸಿ ದೇಶ ಭ್ರಷ್ಟ ಎಂದು ಈಗಾಗಲೇ ಘೋಷಣೆ ಮಾಡಲಿದೆ.

Facebook Comments

Sri Raghav

Admin