ಏಷ್ಯಾಕಪ್’ಗೆ ರೋಹಿತ್ ಕ್ಯಾಪ್ಟನ್, ವಿರಾಟ್‍ಗೆ ರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rohit-Sharma

ಮುಂಬೈ, ಸೆ.1- ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ 16 ಸದಸ್ಯರ ಭಾರತ ತಂಡದ ಆಯ್ಕೆಯನ್ನು ಇಂದು ಪ್ರಕಟಿಸಲಾಗಿದೆ. ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮ ಭಾರತ ತಂಡದ ನಾಯಕರಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಸುರೇಶ್ ಸೈನಾಗೆ ಏಷ್ಯಾ ಕಪ್ ಟೂರ್ನಿಯಲ್ಲಿ ಅವಕಾಶ ಸಿಕ್ಕಿಲ್ಲ. ಆಯ್ಕೆಯಾದ ಭಾರತ ತಂಡ ಈ ರೀತಿ ಇದೆ: ರೋಹಿತ್ ಶರ್ಮ- ನಾಯಕ, ಶಿಖರ್ ದವನ್- ಉಪನಾಯಕ, ಕೆ.ಎಲ್.ರಾಹುಲ್, ಅಂಬಟ್ಟಿ ರಾಯುಡು, ಮನೀಷ್ ಪಾಂಡೆ, ಖೇದಾರ್ ಜಾದವ್, ಮಹೇಂದ್ರಸಿಂಗ್ ಧೋನಿ- ವಿಕೆಟ್ ಕೀಪರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲ್‍ದೀಪ್ ಯಾದವ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬೂಮ್ರಾ, ಶಾರ್ದುಲ್ ಠಾಕೂರ್ ಹಾಗೂ ಕಲೀಲ್ ಅಹಮ್ಮದ್ (ಹೊಸಮುಖ)- ತಂಡದಲ್ಲಿದ್ದಾರೆ.

ಸೆ.15ರಿಂದ ದುಬೈನಲ್ಲಿ ಪಂದ್ಯ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿಯಾಗಲಿದೆ.

Facebook Comments

Sri Raghav

Admin