ಇಂದಿನ ಪಂಚಾಗ ಮತ್ತು ರಾಶಿಫಲ (02-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ದಾರಿಯಲ್ಲಿ ಬಿದ್ದ ಮೂಳೆಯನ್ನು ನೋಡಿ ಸ್ಪರ್ಶವಾದೀತೆಂದು ಹೆದರಿ ಬೇರೆ ದಾರಿಯಲ್ಲಿ ಹೋಗುತ್ತಾನೆ. ತನ್ನ ದೇಹವು ಸಾವಿರಾರು ಮೂಳೆಗಳಿಂದ ತುಂಬಿದೆ ಯೆಂಬುದನ್ನು ಕಾಣುವುದಿಲ್ಲ. -ಪ್ರಭೋಧ ಸುಧಾಕರ

Rashi
ಪಂಚಾಂಗ : 02.09.2018 ಭಾನುವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ರಾ.11.35 / ಚಂದ್ರ ಅಸ್ತ ಬೆ.12.19
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.08.47)
ನಕ್ಷತ್ರ: ಕೃತ್ತಿಕಾ (ರಾ.08.49)/ ಯೋಗ: ವ್ಯಾಘಾತ (ಸಾ.04.25)
ಕರಣ: ಭದ್ರೆ-ಭವ (ಬೆ.09.20-ರಾ.08.47) / ಮಳೆ ನಕ್ಷತ್ರ: ಪೂರ್ವಫಲ್ಗುಣಿ
ಮಾಸ: ಸಿಂಹ / ತೇದಿ: 17

ಇಂದಿನ ವಿಶೇಷ: ಶ್ರೀ ಕೃಷ್ಣ ಜನ್ಮಾಷ್ಟಮಿ ಮನ್ನಾರ್ ಕೃಷ್ಣ ಜಯಂತಿ

# ರಾಶಿ ಭವಿಷ್ಯ
ಮೇಷ : ಕುಟುಂಬದಲ್ಲಿ ಹೊಸ ಮುಖದ ಪರಿಚಯ ವಾಗುವುದು. ಹಿರಿಯರಲ್ಲಿ ಭಕ್ತಿ ಇರುವುದು
ವೃಷಭ : ಬುದ್ಧಿ ಮಂಕಾಗುವುದು. ಪಾಪಿಗಳು, ದುಷ್ಟರು ನಿಮ್ಮ ಮೇಲೆ ಪ್ರತಾಪ ತೋರಿಸುವರು
ಮಿಥುನ: ಕಥೆ ಹೇಳುವವರಿಗೆ, ಬರೆಯುವವರಿಗೆ ವಿರೋಧ ವ್ಯಕ್ತವಾಗುವುದು. ದೂರ ಪ್ರಯಾಣ ಮಾಡುವಿರಿ
ಕಟಕ : ಧರ್ಮಕಾರ್ಯ, ಶುಭ ಕಾರ್ಯ ಮಾಡಲು ಪ್ರಯತ್ನಗಳು ನಡೆಯುತ್ತವೆ
ಸಿಂಹ: ಹಣದ ಕೊರತೆ ಇಲ್ಲದಿದ್ದರೂ ಕುಟುಂಬದಲ್ಲಿ ಕಲಹ ಉಂಟಾಗಲಿದೆ
ಕನ್ಯಾ: ಕೆಲವು ಬಾರಿ ಬುದ್ಧಿ ಮಂಕಾಗುವುದು. ಏನೂ ತೋಚುವುದಿಲ್ಲ
ತುಲಾ: ಪಶು-ಪಕ್ಷಿಗಳ ಮೇಲೆ ವಿಶೇಷವಾದ ಆಸಕ್ತಿ ಇರುವುದು. ಉತ್ತಮ ದಿನ
ವೃಶ್ಚಿಕ: ನಿಮ್ಮ ಹಣವನ್ನು ಚೋರರು ಅಪಹರಿಸುವರು
ಧನುಸ್ಸು: ಎಲ್ಲ ಕಾರ್ಯಗಳನ್ನೂ ನಿಭಾಯಿಸುವಿರಿ
ಮಕರ: ಆಕಸ್ಮಿಕವಾಗಿ ಹಣ ಬರುವುದು
ಕುಂಭ: ತಂದೆಯ ಆರೋಗ್ಯ ಚೆನ್ನಾಗಿರುವುದಿಲ್ಲ
ಮೀನ: ನಿಮ್ಮ ಬಂಧುಗಳು ವಿದೇಶದಲ್ಲಿ ನೆಲೆಸಿರುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin