ಬಕೆಟ್‍ನಲ್ಲಿ ಮುಳುಗಿಸಿ 7 ತಿಂಗಳ ಹೆಣ್ಣು ಮಗು ಕೊಂದ ಕ್ರೂರ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Baby--01

ನವದೆಹಲಿ, ಸೆ.2-ಕುಟುಂಬದ ಕಷ್ಟಕ್ಕೆ ತನ್ನ 7 ತಿಂಗಳ ಹೆಣ್ಣು ಮಗುವೇ ಕಾರಣ ಎಂದು ನಂಬಿದ ತಾಯಿಯೊಬ್ಬಳು ಹಸುಳೆಯ ಕುತ್ತಿಗೆಗೆ ದುಪ್ಪಟ ಬಿಗಿದು ಉಸಿರುಗಟ್ಟಿಸಿ, ನೀರಿನ ಬಕೆಟ್‍ನಲ್ಲಿ ಮುಳುಗಿಸಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.  ದೆಹಲಿಯ ಹಜ್ರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಆ.20ರಂದು ನಡೆದ ಈ ಘಟೆನೆ ಸಂಬಂಧ 27 ವರ್ಷ ಕ್ರೂರ ತಾಯಿ ಅದಿಬಾ ಖಾನ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ಉಸಿರುಗಟ್ಟಿಸಿ ಕೊಂದ ನಂತರ ಶವವನ್ನು ನೀರು ತುಂಬಿದ ಬಕೆಟ್‍ನಲ್ಲಿ ಮುಳುಗಿಸಿ ಶಿಶು ಆಕಸ್ಮಿಕವಾಗಿ ಮುಳುಗಿ ಸತ್ತಿದೆ. ತಾನು ಮತ್ತು ತನ್ನ ಪತಿ ಮಗುವನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಲಿಲ್ಲ ಎಂದು ಆಕೆ ಹೇಳಿಕೆ ನೀಡಿದ್ದಳು. ಆದರೆ, ಹಸುಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಕುತ್ತಿಗೆ ಮೇಲೆ ಮಾರಕ ಒತ್ತಡದಿಂದ ಶಿಶು ಸಾವಿಗೀಡಾಗಿದೆ ಎಂಬ ವರದಿ ಬಂದ ನಂತರ ಅದಿಬಾ ಖಾನ್‍ನನ್ನು ಬಂಧಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.

ಈ ಮಗು ಜನಿಸಿದ ನಂತರ ಕುಟುಂಬದಲ್ಲಿ ತೀವ್ರ ಹಣಕಾಸು ಮತ್ತು ಆರೋಗ್ಯ ಕಷ್ಟ-ತೊಂದರೆಗಳು ಎದುರಾದವು. ಇದೇ ಕಾರಣಕ್ಕಾಗಿ ಮಗುವಿನ ಕುತ್ತಿಗೆಗೆ ದುಪ್ಪಟ ಬಿಗಿದು ಕೊಂದಿದ್ದಾಗಿ ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ಧಾಳೆ.

Facebook Comments

Sri Raghav

Admin