ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಕೇರಳ ಸಿಎಂ ಪಿಣರಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Pinarayi-Vijayan

ತಿರುವನಂತಪುರಂ, ಸೆ.2- ಅನಾರೋಗ್ಯದಿಂದ ಬಳಲುತ್ತಿರುವ ಕೇರಳದ ಸಿಎಂ ವಿಜಯನ್ ಪಿಣರಾಯಿ ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಲು ಇಂದು ತಮ್ಮ ಪತ್ನಿಯೊಂದಿಗೆ ತೆರಳಲಿದ್ದಾರೆ. ಪಿಣರಾಯಿ ಅವರು ನಾಳೆ ಅಮೆರಿಕಾದ ಮಾಯೋ ಕ್ಲಿನಿಕ್‍ನಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಆಗಸ್ಟ್ 19 ರಂದೇ ಅವರು ಅಮೆರಿಕಾಕ್ಕೆ ತೆರಳಬೇಕಾಗಿತ್ತಾದರೂ ಕೇರಳದಲ್ಲಿ ಉಂಟಾದ ನೆರೆ ಪ್ರವಾಹದಿಂದಾಗಿ ಅವರು ತಮ್ಮ ಪ್ರವಾಸವನ್ನು ಮುಂದೂಡಿದ್ದರು.

ಅಮೆರಿಕಾಕ್ಕೆ ತೆರಳುವ ಮುನ್ನ ವಿಜಯನ್ ಅವರು ರಾಜ್ಯಪಾಲ ಪಿ.ಸತ್ಯಾಶಿವಂ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಕೇರಳದ ಮರು ನಿರ್ಮಾಣ ಹಾಗೂ ಸರ್ಕಾರದ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದರು. ಕೇರಳ ಸಿಎಂ ಪಿಣರಾಯಿ ಅವರು ಚಿಕಿತ್ಸೆ ಪಡೆಯಲು ಅಮೆರಿಕಾಕ್ಕೆ ತೆರಳುತ್ತಿರುವುದರಿಂದ ಕೈಗಾರಿಕಾ ಸಚಿವ ಇ.ಪಿ.ಜಯರಾಜ್ ಅವರು ಇತರ ಸಚಿವರ ಸಹಮತದಿಂದ ಹಂಗಾಮಿ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Facebook Comments

Sri Raghav

Admin