ಶಿಸ್ತು ಪಾಲಿಸಿ ಎಂದರೆ ಸರ್ವಾಧಿಕಾರಿ ಹಣೆಪಟ್ಟಿ ಕಟ್ಟುತ್ತಾರೆ : ಮೋದಿ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಸೆ.2-ಇಂದಿನ ದಿನಗಳಲ್ಲಿ ಶಿಸ್ತು ಪಾಲಿಸುವಂತೆ ಸಲಹೆ ಮಾಡಿದರೆ ಅವರಿಗೆ ಸರ್ವಾಧಿಕಾರಿ ಅಥವಾ ದಬ್ಬಾಳಿಕೆ ನಡೆಸುವವರು ಎಂಬ ಹಣೆಪಟ್ಟಿ ಕಟ್ಟುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಷಾದಿಸಿದ್ದಾರೆ.  ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಡಾ. ಎಂ.ವೆಂಕಯ್ಯ ನಾಯ್ಡು ಅವರು ಅನುಭವಗಳ ಕುರಿತ 245 ಪುಟಗಳ ಮೂವಿಂಗ್ ಆನ್… ಮೂವಿಂಗ್ ಫಾರ್ವಡ್ : ಎ ಇಯರ್ ಇನ್ ಆಫೀಸ್ ಹೆಸರಿನ ಪುಸ್ತಕ ಬಿಡುಗಡೆ ಮಾಡಿ ಮೋದಿ ಮಾತನಾಡಿದರು. ವೆಂಕಯ್ಯ ನಾಯ್ಡು ಅವರು ತುಂಬಾ ಶಿಸ್ತಿನ ವ್ಯಕ್ತಿ ಅವರು ತಮ್ಮ ಜವಾಬ್ದಾರಿಯಿಂದ ಎಂದಿಗೂ ನುಣುಚಿಕೊಂಡವರಲ್ಲ. ಅವರು ಸದಾ ದೂರದೃಷ್ಟಿಯ ಉತ್ತಮ ನಾಯಕರು ಎಂದು ಪ್ರಧಾನಿ ಗುಣಗಾನ ಮಾಡಿದರು.

ಈಗ ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಎಂದರೆ, ಶಿಸ್ತು ಪಾಲಿಸುವಂತೆ ಉತ್ತಮ ಸಲಹೆ ಮಾಡಿದರೆ, ಅಂಥವರನ್ನು(ನಾಯ್ಡು) ಸರ್ವಾಧಿಕಾರಿ ಅಥವಾ ದಬ್ಬಾಳಿಕೆ ಮಾಡುವ ವ್ಯಕ್ತಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಶಿಸ್ತು ಪಾಲಿಸುವಂತೆ ಸಲಹೆ ನೀಡಿದರೆ ಅದನ್ನು ತಪ್ಪಾಗಿ ತಿಳಿಯುವ ಜನರೇ ನಮ್ಮಲ್ಲಿ ಹೆಚ್ಚು ಎಂದು ಮೋದಿ ಪರೋಕ್ಷವಾಗಿ ವಿರೋಧ ಪಕ್ಷದವರನ್ನು ಟೀಕಿಸಿದರು.

ವೆಂಕಯ್ಯ ನಾಯ್ಡು ಅವರನ್ನು ನಾನು ಬಹು ಹಿಂದಿನಿಂದಲೂ ಗಮನಿಸುತ್ತಾ ಬಂದಿದ್ದೇನೆ. ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗೆ ಕುಂದುಂಟಾಗದಂತೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ. ತಮಗೆ ದೊರೆತ ಕಾರ್ಯವನ್ನು ಅತ್ಯಂತ ಶ್ರದ್ಧೆ, ಗೌರವ ಮತ್ತು ದಕ್ಷತೆಯಿಂದ ನಿರ್ವಹಿಸುವ ಅಪರೂಪದ ವ್ಯಕ್ತಿ ಅವರೆಂದು ಮೋದಿ ಬಣ್ಣಿಸಿದರು.

Facebook Comments

Sri Raghav

Admin