ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಏಳು ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Lightenning

ಶಹಜಾನ್ಪುರ್,ಸೆ.2-ಉತ್ತರ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಡೆ ಸಿಡಿಲು ಬಡಿದು ಏಳು ಮಕ್ಕಳು ಸಾವನ್ನಪ್ಪಿ, ಆರು ಜನ ಗಾಯಗೊಂಡ ಘಟನೆ ಶಹಜಾನ್ಪುರ್‍ದಲ್ಲಿ ನಡೆದಿದೆ. ಶಮ್‍ಶೆರ್ಪುರ್ ಗ್ರಾಮದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಮಕ್ಕಳು ಮರದಡಿ ತೆರಳಿದ್ದ ವೇಳೆ ಸಿಡಿಲು ಬಡಿದು ಐವರು ಮಕ್ಕಳು ಮೃತಪಟ್ಟು, ಆರು ಮಕ್ಕಳು ಗಾಯಗೊಂಡಿದ್ದಾರೆ.

ಇನ್ನೊಂದು ಪ್ರಕರಣ ಕಿರಿಯಾನ ಗ್ರಾಮದಲ್ಲಿ ನಡೆದಿದ್ದು, ಸಿಡಿಲಿಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಡಿಸಿ ಅಮ್ರಿತ್ ತ್ರಿಪಾಠಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Facebook Comments

Sri Raghav

Admin