ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟಕ್ಕೆ 16 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

UP-Rain

ಲಕ್ನೋ,ಸೆ.2-ದಕ್ಷಿಣ ಭಾರತದ ನಂತರ ಈಗ ಉತ್ತರ ಭಾರತದಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆಗೆ ಸಂಬಂಧ ಘಟನೆಗಳಲ್ಲಿ16 ಮಂದಿ ಮೃತಪಟ್ಟು, ಕೆಲವರು ಕಣ್ಮರೆಯಾಗಿದ್ದಾರೆ. ರಾಜ್ಯದ ಹಲವೆಡೆ ನಿನ್ನೆಯಿಂದ ಬಿರುಸಿನ ವರ್ಷಧಾರೆಯಿಂದ ಕೆಲ ಮನೆಗಳು , ವಿದ್ಯುತ್‍ಕಂಬಗಳು, ಮರಗಳು ಧರೆಗುರುಳಿವೆ.

ಭಾರೀ ಮಳೆ ಮತ್ತು ಕೆಲ ಪ್ರದೇಶಗಳಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ದೆಹಲಿಯಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈಶಾನ್ಯ ಭಾರತದ ಅಸ್ಸೋಂ ಮತ್ತು ಅರುಣಾಚಲ ಪ್ರದೇಶದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ.

Facebook Comments

Sri Raghav

Admin