ರಾಜ್ಯದ ಜನತೆಗೆ ಸಮ್ಮಿಶ್ರ ಸರ್ಕಾರದ ಆಡಳಿತ ತೃಪ್ತಿ ತಂದಿದೆ : ಬಂಡೆಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Bandeppa-Kashyampur--01

ಬೆಂಗಳೂರು,ಸೆ.3-ರಾಜ್ಯದ ಜನತೆಗೆ ಸಮ್ಮಿಶ್ರ ಸರ್ಕಾರದ ಆಡಳಿತ ತೃಪ್ತಿ ತಂದಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಅನೇಕ ಕಡೆಗಳಲ್ಲಿ ಜಯಭೇರಿ ಬಾರಿಸಿದ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.  ಜೆಪಿ ಭವನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಮ್ಮದು ಸುಭದ್ರ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಲವಾರು ಕಡೆ ಜೆಡಿಎಸ್ ಜಯಗಳಿಸಿದೆ ಎಂದರು.   ಋಣ ಪರಿಹಾರ ಕಾಯ್ದೆ ವಿಚಾರವಾಗಿ ಪ್ರಕ್ರಿಯಿಸಿದ ಅವರು, ಇಲ್ಲಿಯವರೆಗೆ ಯಾವ ಸರ್ಕಾರ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡಲು ಹೊರಟಿದೆ. ಆದರೆ ಕಾಯ್ದೆ ಜಾರಿಗೆ ಬರಬೇಕಿದೆ ಎಲ್ಲಾ ಹಂತಗಳನ್ನು ದಾಟಲೇಬೇಕು ಎಂದರು.

Facebook Comments

Sri Raghav

Admin