ರಫೇಲ್ ವಿವಾದದ ನಡುವೆಯೇ 14 ಲಕ್ಷ ಕೋಟಿ ವೆಚ್ಚದ 114 ಫೈಟರ್ ಜೆಟ್‍ ಖರೀದಿಗೆ ಅನುಮೋದನೆ..?

ಈ ಸುದ್ದಿಯನ್ನು ಶೇರ್ ಮಾಡಿ

Fighet-Jet--01

ನವದೆಹಲಿ, ಸೆ.3 (ಪಿಟಿಐ)- ಭಾರೀ ವಿವಾದಕ್ಕೆ ಕಾರಣವಾಗಿರುವ ಭಾರತ-ಫ್ರಾನ್ಸ್ ನಡುವಣ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ನಡುವೆಯೇ ವಿವಿಧ ದೇಶಗಳಿಂದ 20 ಶತಕೋಟಿ ಡಾಲರ್(ಸುಮಾರ್ 14 ಲಕ್ಷ ಕೋಟಿ ರೂ.ಗಳು) ವೆಚ್ಚದಲ್ಲಿ 114 ಫೈಟರ್ ಜೆಟ್‍ಗಳನ್ನು ಖರೀದಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಪ್ರಾಥಮಿಕ ಅನುಮೋದನೆ ನೀಡಲು ಸಜ್ಜಾಗಿದೆ.

ಇದನ್ನು ಎಲ್ಲ ರಕ್ಷಣಾ ವ್ಯವಹಾರಗಳ ಮಾತೆ ಎಂದು ಬಣ್ಣಿಸಲಾಗಿದೆ. ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಖರೀದಿ ಪ್ರಸ್ತಾವನೆಗೆ ಈಗ ಜೀವ ಬಂದಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನಗಳ ಮಂಡಳಿ(ಡಿಎಸಿ) ಈ ತಿಂಗಳಾಂತ್ಯ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಅಗತ್ಯ ಸಮ್ಮತಿಗಾಗಿ ಪರಾಮರ್ಶೆ ನಡೆಸಲಿದೆ.  ಭಾರತ-ಫ್ರಾನ್ಸ್ ನಡುವೆ 59,000 ಕೋಟಿ ರೂ.ಗಳ ರಫೇಲ್ ಜೆಟ್‍ಗಳ ಖರೀದಿ ಒಪ್ಪಂದದಲ್ಲಿ ಭಾರೀ ಅಕ್ರಮ-ಅವ್ಯವಹಾರಗಳ ನಡೆದಿವೆ ಎನ್ನಲಾದ ಆರೋಪಗಳು ಈಗ ದೊಡ್ಡ ವಿವಾದದ ಸ್ವರೂಪ ಪಡೆದಿದೆ. ಅಲ್ಲದೇ ವಿರೋಧಪಕ್ಷ ಕಾಂಗ್ರೆಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಈ ಗಂಭೀರ ವಿವಾದ ನಡುವೆ ಮತ್ತೊಂದು ಮೆಗಾ ಡಿಲ್‍ಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಇನ್ನೊಂದು ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
114 ಫೈಟರ್ ಜೆಟ್‍ಗಳನ್ನು ಹೊಂದುವ ಈ ಉದ್ದೇಶಿತ ಯೋಜನೆ ಅಡಿ, ಮೊದಲು 18 ಯುದ್ಧ ವಿಮಾನಗಳು ಮೂರು ಅಥವಾ ನಾಲ್ಕು ವರ್ಷಗಳಲ್ಲಿ ವಿದೇಶಗಳಲ್ಲಿ ತಯಾರಾಗಿ ಭಾರತಕ್ಕೆ ಹಾರಿ ಬರಲಿವೆ. ಉಳಿದ ಫೈಟರ್ ಜೆಟ್‍ಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ.

ಈ ದೊಡ್ಡ ವ್ಯವಹಾರದಲ್ಲಿ ರಷ್ಯಾದ ಸುಖೋಯ್-35 ಸಮರ ವಿಮಾನವು ಸಹ ಸ್ಪರ್ಧೆಯಲ್ಲಿದೆ. ಅಮೆರಿಕ, ಸ್ವೀಡನ್, ಫ್ರಾನ್ಸ್ ದೇಶಗಳ ನಡುವೆ ಈ ಸಂಬಂಧ ವ್ಯವಹಾರಗಳು ಕುದುರಲಿದೆ. ಎಫ್/ಎ-18, ಎಫ್-16, ಗ್ರಿಪೆನ್-ಇ, ಮಿಗ್-35, ಯುರೋಫೈಟರ್ ಟೈಫೂನ್ ಮೊದಲಾದ ಫೈಟರ್‍ಜೆಟ್‍ಗಳು ಈ ರೇಸ್‍ನಲ್ಲಿವೆ.

Facebook Comments

Sri Raghav

Admin