ಜಲ ಮತ್ತು ಒಳಚರಂಡಿ ಮಂಡಳಿಯಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

BWSSB
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯು ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ ವೃಂದದ (ಹೈದರಬಾದ್- ಕರ್ನಾಟಕಕೇತರರಿಗೆ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 232
ಹುದ್ದೆಗಳ ವಿವರ
ಬಿ ದರ್ಜೆಯ ತಾಂತ್ರಿಕ ಹುದ್ದೆಗಳು – 49
1.ಸಹಾಯಕ ಅಭಿಯಂತರ (ಸಿವಿಲ್) – 33
2.ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) – 09
3.ಸಹಾಯಕ ಅಭಿಯಂತರ (ಮೆಕ್ಯಾನಿಕಲ್) – 05
4.ಸಹಾಯಕ ಅಭಿಯಂತರ (ಕಂಪ್ಯೂಟರ್ ವಿಜ್ಞಾನ) – 02
ಸಿ ದರ್ಜೆಯ ತಾಂತ್ರಿಕ ಹುದ್ದೆಗಳು – 39
5.ಕಿರಿಯ ಅಭಿಯಂತರ (ಸಿವಿಲ್) – 23
6.ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) – 12
7.ಕಿರಿಯ ಅಭಿಯಂತರ (ಮೆಕ್ಯಾನಿಕಲ್) – 04
ಸಿ ದರ್ಜೆಯ ತಾಂತ್ರಿಕೇತರ ಹುದ್ದೆಗಳ – 144
8.ಸಹಾಯಕ – 20
9.ಅಪರೇಟರ್ – 01
10.ಎರಡನೇ ದರ್ಜೆ ಉಗ್ರಾಣ ಪಾಲಕ – 08
10.ಮಾಪನ ಓದುಗ – 110
11.ಕಿರಿಯ ಸಹಾಯಕ – 02
12.ಸೀಘ್ರಲಿಪಿಗಾರರು – 02
13.ಬೆರಳಚ್ಚುಗಾರ ಯಾ ಡಾಟಾ ಎಂಟ್ರಿ ಅಪರೇಟರ್ – 01
ವಿದ್ಯಾರ್ಹತೆ : ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಕ್ರ ಸಂ 1ರ ಹುದ್ದೆಗೆ ಸಿವಿಲ್ ಪದವಿ, ಕ್ರ.ಸಂ 2ರ ಹುದ್ದೆಗೆ ಎಲೆಕ್ಟ್ರಿಕಲ್ ಪದವಿ, ಕ್ರ ಸಂ 3 ರ ಹುದ್ದೆಗೆ ಮಾಕ್ಯಾನಿಕಲ್ ಪದವಿ, ಕ್ರ ಸಂ 4 ರ ಹುದ್ದೆಗೆ ಕಂಪ್ಯೂಟರ್ ವಿಜ್ಞಾನ, ಕ್ರ ಸಂ 5ರ ಹುದ್ದೆಗೆ ಸಿವಿಲ್ ಡಿಪ್ಲೋಮಾ, ಕ್ರ ಸಂ 6ರ ಹುದ್ದೆಗೆ ಎಲೆಕ್ಟ್ರಿಕಲ್ ಡಿಪ್ಲೋಮಾ, ಕ್ರ ಸಂ 7ರ ಹುದ್ದೆಗೆ ಮಾಕ್ಯಾನಿಕಲ್ ಡಿಪ್ಲೋಮಾ, ಕ್ರ ಸಂ 8ರ ಹುದ್ದೆಗೆ ಯಾವುದೇ ಪದವಿ, ಕ್ರ ಸಂ 9ರ ಹುದ್ದೆಗೆ ಪಿಯುಸಿ ಜೊತೆಗೆ ಐಟಿಐ ಕೋರ್ಸ, ಕ್ರ ಸಂ 10 ರಿಂದ 12ರವರೆಗಿನ ಹುದ್ದೆಗಳಿಗೆ ಪಿಯುಸಿ, ಕ್ರ ಸಂ 13 ಮತ್ತು 14ರ ಹುದ್ದೆಗೆ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಗೊತ್ತಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ವಯಸನ್ನು ನಿಗದಿ ಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ,2ಬಿ, 3ಎ,3ಬಿ, ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ, ಪ್ರವರ್ಗ- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಬಿ ವೃಂದದ ಹುದ್ದೆಗೆ 600 ರೂ, ಸಿ ವೃಂದದ ಹುದ್ದೆಗೆ 400 ರೂ, ಪ.ಜಾ, ಪ. ಪಂ, ಪ್ರವರ್ಗ 1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.bwssb.gov.in   ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments