ಕಾಶ್ಮೀರ ಪರಿಸ್ಥಿತಿ ಪರಾಮರ್ಶಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಈ ಸುದ್ದಿಯನ್ನು ಶೇರ್ ಮಾಡಿ

Nirmala-Seetaraman

ಶ್ರೀನಗರ, ಸೆ.3-ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಜಮ್ಮು ಮತ್ತು ಕಾಶ್ಮೀರ ಭೇಟಿ ವೇಳೆ ಕಣಿವೆ ರಾಜ್ಯದ ವಾಸ್ತವ ಸನ್ನಿವೇಶ ಮತ್ತು ಭದ್ರತಾ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದ್ದಾರೆ. ಕಾಶ್ಮೀರ ಕಣಿವೆ ಗಡಿ ಜಿಲ್ಲೆ ಕುಪ್ವಾರದಲ್ಲಿನ ಸೇನಾ ಮುಂಚೂಣಿ ನೆಲೆಗಳಿಗೆ ನಿನ್ನೆ ಭೇಟಿ ನೀಡಿದ ಅವರು ವೈರಿ ಪಡೆ ನಿಗ್ರಹ ಕಾಯಾಚರಣೆ ಸಿದ್ದತೆಗಳು ಹಾಗೂ ಒಳನುಸುಳುವಿಕೆ ಪ್ರತಿಬಂಧಕ ವ್ಯವಸ್ಥೆಗಳನ್ನು ಖುದ್ದಾಗಿ ಪರಾವರ್ಶಿಸಿದರು.

ಭೂ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಉನ್ನತ ಸೇನಾಧಿಕಾರಿಗಳು ರಕ್ಷಣಾ ಸಚಿವರೊಂದಿಗೆ ಇದ್ದರು. ಶತ್ರುಗಳ ಆಕ್ರಮಣ ಹಾಗೂ ಗಡಿಯಲ್ಲಿ ಉಗ್ರಗಾಮಿಗಳ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ಸರ್ವಸನ್ನದ್ಧ ಸಿದ್ದತೆ ಬಗ್ಗೆ ನಿರ್ಮಲಾ ಅವರಿಗೆ ವಿವರಿಸಿದರು.ಬಳಿಕ ಮುಂಚೂಣಿ ಪ್ರದೇಶದ ಸೇನಾಪಡೆಗಳೊಂದಿಗೆ ಸಂವಾದ ನಡೆಸಿದ ಅವರು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ 24 ತಾಸುಗಳ ಕಾಲ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ಯೋಧರ ವೃತ್ತಿಪರತೆಯನ್ನು ಶ್ಲಾಘಿಸಿದರು. ವೈರಿ ಪಡೆಗಳು ಹಾಗೂ ಭಯೋತ್ಪಾದಕರಿಂದ ಎದುರಾಗಬಹುದಾದ ಯಾವುದೇ ಕುತಂತ್ರಗಳನ್ನು ಮಣಿಸಲು ಸರ್ವಸನ್ನದ್ಧವಾಗಿರುವಂತೆ ಅವರು ಯೋಧರಿಗೆ ಸಲಹೆ ಮಾಡಿದರು.

Nirmala--01

Facebook Comments

Sri Raghav

Admin