ಕೆಜಿಎಫ್‍ನಿಂದ ಬೆಂಗಳೂರಿಗೆ ಮೆಮೋ ರೈಲು ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

KGF-Baengalore-Memo-rail
ಕೆಜಿಎಫ್, ಸೆ.3- ಕೆಜಿಎಫ್ ಜನತೆಯ ಜೀವನಾಡಿ ಎಂದೇ ಬಿಂಬಿತವಾಗಿದ್ದ ಸ್ವರ್ಣ ರೈಲು ಕೊನೆ ಪ್ರಯಾಣವನ್ನು ಮಾಡಿ ಇಂದಿನಿಂದ ಹೊಸ ಮೆಮೋ ರೈಲು ಮುಂಜಾನೆ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಸಾಗಿತು. ಪ್ರತಿನಿತ್ಯ ಸಾವಿರಾರು ಮಂದಿಗೆ ಜೀವನಾಧಾರವಾಗಿ ಬೆಳಗಿನ ರೈಲು ಹೊಸ ರೂಪದಲ್ಲಿ ಇಂದು ಬಂದಾಗ ಮಾರಿಕುಪ್ಪಂ, ಚಾಂಪಿಯನ್, ಊರಿಗಾಂ, ಕೋರಮಂಡಲ್ ಮತ್ತು ಬೆಮಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಅಚ್ಚರಿಗೊಂಡರು.

ರೈಲ್ವೆ ಇಲಾಖೆ ಸ್ವರ್ಣ ರೈಲನ್ನು ನಿಲ್ಲಿಸಿದ್ದರೂ, ಮೆಮೂ ರೈಲನ್ನು ಬಿಟ್ಟಿರುವುದರಿಂದ ಜನತೆ ಸಮಾಧಾನದಿಂದ ಇದ್ದಾರೆ. ಆದರೆ ಸ್ವರ್ಣ ರೈಲಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದ ಜನತೆ, ಅದರಿಂದ ಹೊರಬರಲು ಕೊಂಚ ಕಾಲಾವಕಾಶ ಬೇಕಾಗಿದೆ.  ಬಿಜಿಎಂಎಲ್ ಮುಚ್ಚಿದ ಮೇಲೆ ಕೆಲಸದ ಅನ್ವೇಷಣೆಗಾಗಿ ಹೊರಟ ಬಿಜಿಎಂಎಲ್ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಸ್ವರ್ಣ ರೈಲೇ ಆಶ್ರಯವಾಗಿತ್ತು. ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಬಾಡಿಗೆ ನೀಡಿ ಮನೆ ಮಾಡುವ ಬದಲು ಪ್ರತಿನಿತ್ಯ ಬೆಂಗಳೂರಿಗೆ ಹೋಗಿ ಸಂಪಾದನೆ ಮಾಡುವುದು ಆರಾಮದಾಯಕ ಮತ್ತು ಲಾಭದಾಯಕ ಎಂದು ಜನತೆ ಭಾವಿಸಿದ್ದರು.

kgf. 4

ಆಧುನಿಕ ಮೆಮೂ ರೈಲಿನಲ್ಲಿ 4 ಮೋಟಾರ್ ಕಾರ್ ಮತ್ತು 12 ಟ್ರೇಲಿಂಗ್ ಕಾರ್ ಇರಲಿದೆ. ಪ್ರತಿ ಬೋಗಿಯಲ್ಲಿ 55 ಸೀಟ್‍ಗಳಿದ್ದು, 171 ಮಂದಿ ನಿಂತು ಕೊಳ್ಳಲು ಅವಕಾಶವಿದೆ. ಇದರಿಂದಾಗಿ ಸ್ವರ್ಣ ರೈಲಿಗಿಂತ ಹೆಚ್ಚಿನ ಪ್ರಯಾಣಿಕರಿಗೆ ಸ್ಥಳಾವಕಾಶ ಸಿಗಲಿದೆ. ಆದರೆ ಕುಳಿತುಕೊಳ್ಳುವ ಸಾಮಥ್ರ್ಯ ಕಡಿಮೆಯಾಗಲಿದೆ.
ಸ್ವರ್ಣ ರೈಲಿನಲ್ಲಿ ಬಹುತೇಕ ಪ್ರಯಾಣಿಸುವವರು ಶ್ರಮಜೀವಿಗಳು. ಬೇಗ ಎದ್ದು ಸಿದ್ದರಾಗಿ, ಇಡೀ ದಿನ ಕೆಲಸ ಮಾಡಿ, ಪುನಃ ರೈಲಿಗೆ ಬರುತ್ತಾರೆ. ಹೋಗುವಾಗ ಮತ್ತು ಬರುವಾಗ ಸೀಟ್ ಸಿಗದೆ ಇದ್ದರೆ, ನಾಲ್ಕೈದು ಗಂಟೆಗಳ ಕಾಲ ನಿಂತು ಬರುವುದು ತ್ರಾಸದಾಯಕ ಎಂದು ಬಹುತೇಕ ಪ್ರಯಾಣಿಕರು ಆರೋಪಿಸುತ್ತಾರೆ. ಆ ದೃಷ್ಟಿಯಿಂದಲೇ ಈ ಮೊದಲೇ ಮೆಮೂ ರೈಲನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದರೂ, ಜನತೆಯ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿತ್ತು. ಕೆಲ ಸಂಘಟನೆಗಳು ಪ್ರತಿಭಟಿಸಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಸಹ ಹೆಚ್ಚುವರಿ ಬಂದೋಬಸ್ತನ್ನು ಎಲ್ಲಾ ರೈಲು ನಿಲ್ದಾಣದಲ್ಲಿ ಮಾಡಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಲಿಲ್ಲ.

kgf. 1 kgf. 5

kgf

Facebook Comments

Sri Raghav

Admin