ಜೆಡಿಎಸ್ ಒಪ್ಪಿದರೆ ಅಧಿಕಾರ ಹಿಡಿಯುತ್ತೇವೆ : ಪ್ರತಾಪ್ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

prathap-simha
ಮೈಸೂರು, ಸೆ.3-ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಸಮಾಧಾನ ತಂದಿದೆ. ಜೆಡಿಎಸ್‍ನವರು ಒಪ್ಪಿದರೆ ಅಧಿಕಾರ ಹಿಡಿಯುತ್ತೇವೆ. ಇಲ್ಲದಿದ್ದರೆ ಪ್ರತಿಪಕ್ಷದಲ್ಲಿ ಕೂರುತ್ತೇವೆ ಎಂದು ಸಂಸದ ಪ್ರತಾಪ್‍ಸಿಂಹ ಹೇಳಿದರು. ಫಲಿತಾಂಶ ಪ್ರಕಟಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೇವಲ 13 ಸ್ಥಾನ ಗಳಿಸಿದ್ದೆವು. ಈ ಬಾರಿ 22 ವಾರ್ಡ್‍ಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೆಚ್ಚು ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದರೂ ಮೈಸೂರಿನಲ್ಲಿ ನಮಗೆ ಜನತೆಯ ಬೆಂಬಲ ಸಿಕ್ಕಿದೆ. ಕಳೆದ ಬಾರಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಪಾಲಿಕೆಯ ಅಧಿಕಾರ ಹಿಡಿದಿದ್ದೆವು. ಈ ಬಾರಿ ಆಯ್ಕೆಯನ್ನು ಜೆಡಿಎಸ್‍ಗೇ ಬಿಟ್ಟಿದ್ದೇವೆ ಎಂದು ಹೇಳಿದರು. ಜೆಡಿಎಸ್ ನಮ್ಮೊಂದಿಗೆ ಬಂದರೆ ಪಾಲಿಕೆಯಲ್ಲಿ ನಾವು ಆಡಳಿತ ನಡೆಸುತ್ತೇವೆ. ನಿರ್ಧಾರ ಅವರಿಗೇ ಬಿಟ್ಟದ್ದು. ಅವರು ಬಾರದೆ ಇದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇವೆ ಎಂದು ಪ್ರತಾಪ್‍ಸಿಂಹ ಹೇಳಿದರು.

Facebook Comments