ಒಲಿಂಪಿಕ್‍’ನಲ್ಲಿ ಸ್ಥಾನ ಪಡೆದ ಅಂಜುಂ, ಅಪೂರ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Oylampic-Anjum-Apoorvi

ಚಾಂಗ್‍ವೊನ್, ಸೆ.3- ಭಾರತೀಯ ಶೂಟರ್’ಗಳಾದ ಅಂಜುಂ ಮೌಡ್ಗಿಲ್ ಮತ್ತು ಅಪೂರ್ವಿ ಚಾಂದೆಲಾ 2020ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗುವ ಮೂಲಕ ದೇಶಕ್ಕೆ ಹೆಮ್ಮೆಪಡುವಂತಾಗಿದೆ.  ಇದರೊಂದಿಗೆ ಒಲಿಂಪಿಕ್ ಗೇಮ್ಸ್’ನಲ್ಲಿ ಅವಕಾಶ ಪಡೆದ ಪ್ರಥಮ ಭಾರತೀಯರು ಎಂದು ಹೆಗ್ಗಳಿಕೆಗೆ ಈ ಪ್ರತಿಭಾವಂತ ಶೂಟರ್’ಗಳು ಪಾತ್ರರಾಗಿದ್ದಾರೆ.

ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ಇಂದು ನಡೆದ ಐಎಸ್‍ಎಸ್‍ಎಫ್ ವಿಶ್ವಚಾಂಪಿಯನ್‍ಶಿಪ್‍ನ ಮಹಿಳೆಯರ 10 ಮೀಟರ್ ಏರ್‍ರೈಫಲ್ ಸ್ಪರ್ಧೆಯಲ್ಲಿ ಅಂಜುಂ ಮತ್ತು ಅಪೂರ್ವಿ ಅನುಕ್ರಮವಾಗಿ ಬೆಳ್ಳಿ ಹಾಗೂ ನಾಲ್ಕನೇ ಸ್ಥಾನ ಪಡೆದರು. ಈ ಸಾಧನೆಯೊಂದಿಗೆ ಒಲಿಂಪಿಕ್ ಗೇಮ್ಸ್’ನ ರೈಫಲ್ ವಿಭಾಗದಲ್ಲಿ ಸ್ಫರ್ಧಿಸುವ ಅವಕಾಶ ಗಿಟ್ಟಿಸಿದ್ದಾರೆ. ಇವರಿಬ್ಬರ ಉತ್ತಮ ಸಾಧನೆಯನ್ನು ಪರಿಗಣಿಸಿರುವ ಅಂತಾರಾಷ್ಟ್ರೀಯ ರೈಫಲ್ ಸ್ಪರ್ಧೆ ಆಯ್ಕೆ ಮಂಡಳಿ ಒಲಿಂಪಿಕ್ ಸ್ಪರ್ಧೆಯನ್ನು ಖಚಿತಪಡಿಸಿದೆ.

Facebook Comments

Sri Raghav

Admin