ಭಾರತ ಆಯ್ತು, ಈಗ ಜಪಾನ್‍ ಹಿಂದೆ ಬಿದ್ದ ಕಿರಿಕ್ ಚೀನಾ..!

ಈ ಸುದ್ದಿಯನ್ನು ಶೇರ್ ಮಾಡಿ

CHina--001

ಟೋಕಿಯೊ, ಸೆ.3-ಕಲಹಪ್ರಿಯ ದೇಶ ಎಂದೇ ಏಷ್ಯಾ ಖಂಡದಲ್ಲಿ ಗುರುತಿಸಿಕೊಂಡಿರುವ ಚೀನಾ, ಈಗ ಉದಯರವಿ ನಾಡು ಜಪಾನ್‍ಗೆ ಕಿರಿಕಿರಿ ಉಂಟು ಮಾಡಿದೆ. ಭಾರತದ ಈಶಾನ್ಯ ಪ್ರಾಂತ್ಯದ ಡೋಕ್ಲಾಂನಲ್ಲಿ ಸೇನಾ ಚಟುವಟಿಕೆಗಳ ಮೂಲಕ 72 ದಿನಗಳ ಕಾಲ ಆತಂಕಕ್ಕೆ ಕಾರಣವಾಗಿದ್ದ ಚೀನಾ ಈಗ ಜಪಾನ್ ಗಡಿ ಭಾಗದಲ್ಲೂ ಮಿಲಿಟರಿ ಕ್ರಮಗಳನ್ನು ತೀವ್ರಗೊಳಿಸಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಚೀನಾ ಮತ್ತು ರಷ್ಯಾ ದೇಶಗಳು ಸೇನಾ ಚಟುವಟಿಕೆಗಳನ್ನು ತೀವ್ರಗೊಳಿಸಿದೆ ಹಾಗೂ ಉತ್ತರ ಕೊರಿಯಾ ಆಗಾಗ ಅಹಿತಕರ ಸನ್ನಿವೇಶ ಸೃಷ್ಟಿಸುತ್ತಿದೆ. ಇದರಿಂದ ಭದ್ರತಾ ವಾತಾವರಣ ಹದಗೆಟ್ಟಿದೆ ಎಂದು ಜಪಾನ್ ಸರ್ಕಾರ ಆರೋಪಿಸಿ, ಈ ಮೂರೂ ದೇಶಗಳಿಗೂ ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಚೀನಾ ಏಕಪಕ್ಷೀಯವಾಗಿ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಾ, ಮಿಲಿಟಿರಿ ಚಟುವಟಿಕೆಗಳನ್ನು ವೃದ್ದಿಸಿಕೊಂಡಿದೆ. ಜಪಾನ್ ಗಡಿ ಭಾಗದ ಸುತ್ತಮುತ್ತ ಹೊಸ ವಾಯು ನೆಲೆ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಅಲ್ಲದೆ, ವಿವಾದಿತ ಪೂರ್ವ ಕರಾವಳಿ ದ್ವೀಪಗಳ ಬಳಿಕ ಅಣ್ವಸ್ತ್ರ ಜಲಾಂರ್ತಗಾಮಿಯನ್ನು ನಿಯೋಜಿಸಿದೆ ಎಂದು ಜಪಾನ್ ರಕ್ಷಣಾ ಸಚಿವ ಇಟ್ಸುನೊರಿ ಒನೊಡೆರಾ ಆರೋಪಿಸಿದ್ದಾರೆ.

Facebook Comments

Sri Raghav

Admin