ಕೊಪ್ಪಳ ನಗರಸಭೆ : ಕಾಂಗ್ರೆಸ್’ಗೆ 15, ಬಿಜೆಪಿ 10, ಜೆಡಿಎಸ್ 2

ಈ ಸುದ್ದಿಯನ್ನು ಶೇರ್ ಮಾಡಿ

Koppala-Nagara-sabhe

ಕೊಪ್ಪಳ, ಸೆ.3-ಜಿಲ್ಲೆಯ 4 ಸ್ಥಾಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ ಒಂದರಲ್ಲಿ ಬಹುಮತಗಳಿಸಿದರೆ, ಉಳಿದೆರಡು ಸಂಸ್ಥೆಗಳು ಕೂದಲೆಳೆ ಅಂತರದಲ್ಲಿ ಬಹುಮತ ತಪ್ಪಿಸಿಕೊಂಡಿವೆ. ಕೊಪ್ಪಳ ನಗರಸಭೆಯ 31ಸ್ಥಾನಗಳ ಪೈಕಿ ಕಾಂಗ್ರೆಸ್ 15ರಲ್ಲಿ ಗೆದಿದ್ದರೆ, ಬಿಜೆಪಿ 10ರಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 2, ಪಕ್ಷೇತರರು 4 ಕ್ಷೇತ್ರಗಳಲ್ಲಿ ಗೆಲುವು ಸಾಧಸಿದ್ದಾರೆ.  [ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ LIVE UPDATES ]

ಸರಳ ಬಹುಮತಕ್ಕೆ ಅಗತ್ಯವಿರುವ 16 ಸ್ಥಾನಗಳನ್ನು ಗಳಿಸಲು ಕಾಂಗ್ರೆಸ್ ವಿಫಲವಾಗಿರುವುದರಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಅಥವಾ ಪಕ್ಷೇತರರ ಬೆಂಬಲ ಪಡೆಯಬೇಕಾಗಿದೆ. ಕೊಪ್ಪಳ ನಗರಸಭೆಯ ವಾರ್ಡ್ 5ರಲ್ಲಿ ಬಿಜೆಪಿ ಅಭ್ಯರ್ಥಿ ವಿದ್ಯಾಸುನೀಲ್ ಹೆಸರೂರು ಅವರು ಕಾಂಗ್ರೆಸ್‍ನ ಅಭ್ಯರ್ಥಿ ರೇಣುಕಾ ಕಲ್ಲೇಶಪ್ಪ ಪೂಜಾರ್ ಅವರ ವಿರುದ್ಧ ಒಂದು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ವಿದ್ಯಾ ಅವರು 234 ಮತಗಳಿಸಿದರೆ, ರೇಣುಕಾ ಅವರು 233 ಮತಗಳನ್ನು ಗಳಿಸಿದ್ದಾರೆ.

ಗಂಗಾವತಿ ಪುರಸಭೆಯ 35ಕ್ಷೇತ್ರಗಳ ಪೈಕಿ ಬಹುಮತಕ್ಕೆ 18 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದೆ. ಇಲ್ಲಿ ಪಕ್ಷೇತರರು 2 ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಡುವ ಸಾಧ್ಯತೆ ಇದೆ. ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಕುಷ್ಠಗಿ ಪುರಸಭೆಯ 23 ಕ್ಷೇತ್ರಗಳಲಿ ಕಾಂಗ್ರೆಸ್ 12ರಲ್ಲಿ ಜಯಗಳಿಸಿ ಬಹುಮತ ಗಳಿಸಿದೆ. ಬಿಜೆಪಿ 8ರಲ್ಲಿ, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಯಲಬುರ್ಗ ಪಟ್ಟಣ ಪಂಚಾಯ್ತಿ 15 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 3, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

Facebook Comments

Sri Raghav

Admin