ಲೋಕಲ್ ಕುಸ್ತಿ ಗೆದ್ದ ಅಪ್ಪ-ಮಗ, ಪತಿ-ಪತ್ನಿ

ಈ ಸುದ್ದಿಯನ್ನು ಶೇರ್ ಮಾಡಿ

Fathr--01

ಬೆಂಗಳೂರು,ಸೆ.3- ಸ್ಥಳೀಯ ಸಂಸ್ಥೆ ಚುನಾವಣೆ ಅಚ್ಚರಿಯ ಫಲಿತಾಂಶಗಳನ್ನು ತಂದಿದೆ. ಒಂದೆಡೆ ಅಪ್ಪ-ಮಗ ಗೆಲುವು ಸಾಧಿಸಿದರೆ. ಮತ್ತೊಂದೆಡೆ ಪತಿ-ಪತ್ನಿ ಇಬ್ಬರೂ ಚುನಾಯಿತರಾಗಿ ಹರ್ಷದಹೊನಲಲ್ಲಿ ತೇಲಾಡಿದ್ದಾರೆ. ಹಲವೆಡೆ ಯಾರ ಹಂಗೂ ಇಲ್ಲದೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ವಿಶೇಷವಾಗಿದೆ. ಖಾನಾಪುರ ಪಟ್ಟಣ ಪಂಚಾಯ್ತಿಯಲ್ಲಿ ಅಪ್ಪ-ಮಗ ಜಯಭೇರಿ ಭಾರಿಸಿದ್ದಾರೆ. 12ನೇ ವಾರ್ಡ್‍ನಿಂದ ತಂದೆ ರಫೀಕ್ ಹಾಗೂ 17ನೇ ವಾರ್ಡ್‍ನಿಂದ ಮಗ ಮಝರ್ ಗೆಲುವು ಸಾಧಿಸಿದ್ದಾರೆ. ಮೊದಲಿಗೆ ಒಬ್ಬರೆ ಕಣಕ್ಕಿಳಿಯಬೇಕೆಂದು ಚಿಂತಿಸಲಾಗಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಇಬ್ಬರೂ ಕಣಕ್ಕಿಳಿದು ಅದೃಷ್ಟ ಪರಿಕ್ಷೆಗೆ ಮುಂದಾಗಿದ್ದರು. ಜನರು ನಮ್ಮ ಕೈ ಹಿಡಿದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

# ನಗರಸಭೆಗೆ ದಂಪತಿ ಆಯ್ಕೆ:
ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ದಂಪತಿ ಜಯಗಳಿಸಿದ್ದಾರೆ. ನಗರಸಭೆ ವಾರ್ಡ್ ನಂ.11ರಲ್ಲಿ ಪತ್ನಿ ಜಯಂತಿ ಹಾಗೂ ವಾರ್ಡ್ ನಂ.14ರಲ್ಲಿ ಪತಿ ಮಂಜುನಾಥ್ ಗೊಪ್ಪೆ ವಿಜಯಿಗಳಾಗಿದ್ದು, ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಮಂಜುನಾಥ್ ಗೊಪ್ಪೆಗೆ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮತ್ತೆ ಜಯಭೇರಿ ಬಾರಿಸಿ ನಗರಸಭೆಗೆ ಆಯ್ಕೆಯಾಗಿದ್ದಾರೆ.  [ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ LIVE UPDATES ]

Coupels-win-In-chitradurga-

# ದಂಪತಿ ಹ್ಯಾಟ್ರಿಕ್ ಸಾಧನೆ:
ಎಂಇಎಸ್ ಪ್ರಾಬಲ್ಯವಿರುವ ಖಾನಾಪುರ ಪಟ್ಟಣ ಪಂಚಾಯಿತಿಯಲ್ಲಿ ಪತಿ-ಪತ್ನಿ ಪಕ್ಷೇತರರಾಗಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಖಾನಾಪುರ ಪಪಂ ಇತಿಹಾಸದಲ್ಲೇ ನೂತನ ದಾಖಲೆ ಇದಾಗಿದೆ. ಖಾನಾಪುರ ವಾರ್ಡ್ ನಂ.5ರಲ್ಲಿ ಪ್ರತಿನಿಧಿಸಿದ್ದ ಸಿದ್ಧೋಜಿ ಗಾವಡೆ ಹಾಗೂ ವಾರ್ಡ್ ನಂ.14ರಲ್ಲಿ ಸ್ಪರ್ಧಿಸಿದ್ದ ಶೋಭಾ ಗಾವಡೆ ವಿಜೇತರಾಗಿದ್ದಾರೆ. ಸಿದ್ಧೋಜಿ ಗಾವಡೆ 187 ಮತಗಳನ್ನು ಪಡೆಯುವ ಮೂಲಕ 100 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇನ್ನು ಇವರ ಪತ್ನಿ ಶೋಭಾ ಗಾವಡೆ 192 ಮತ ಪಡೆದಿದ್ದು, ಒಂದೇ ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ. ಶೋಭಾ ಎರಡು ಸಲ 12ನೆ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರೆ, ಈ ಬಾರಿ 14ನೆ ವಾರ್ಡ್‍ನಿಂದ ಕಣಕ್ಕಿಳಿದು, ಪ್ರತಿಸ್ಪರ್ಧಿ ಸುನೀತಾ ಮೇಕರ್ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈ ದಂಪತಿ ಮೂರನೆ ಬಾರಿ ಖಾನಾಪುರ ಪಪಂ ಮಟ್ಟಿಲೇರುತ್ತಿದ್ದಾರೆ.

Facebook Comments

Sri Raghav

Admin