ವಿಶ್ವದ ಅಗ್ರಮಾನ್ಯ ಸುದ್ದಿಸಂಸ್ಥೆ ರಾಯಿಟರ್ಸ್’ನ ಇಬ್ಬರು ವರದಿಗಾರರಿಗೆ 7 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Jail--014

ಯಾನ್‍ಗೊನ್, ಸೆ.3 (ಪಿಟಿಐ)- ರೋಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡದ ವರದಿ ಮಾಡುವಾಗ ಮ್ಯಾನ್ಮಾರ್ ದೇಶದ ರಹಸ್ಯ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ವಿಶ್ವದ ಅಗ್ರಮಾನ್ಯ ಸುದ್ದಿಸಂಸ್ಥೆ ರಾಯಿಟರ್ಸ್‍ನ ಇಬ್ಬರು ಪತ್ರಕರ್ತರಿಗೆ ಇಂದು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.  ಇಬ್ಬರು ವರದಿಗಾರರಿಗೆ ಕಾರಾಗೃಹ ಶಿಕ್ಷೆ ವಿಧಿಸಿರುವ ಕ್ರಮದ ಬಗ್ಗೆ ವಿಶ್ವದಾದ್ಯಂತ ಮಾಧ್ಯಮ ವಲಯಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಧ್ಯಮದ ಸ್ವಾತಂತ್ರದ ಮೇಲೆ ದಾಳಿಯಾಗಿದೆ ಎಂದು ಆರೋಪಿಸಿರುವ ಅಂತಾರಾಷ್ಟ್ರೀಯ ಪ್ರತಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ ಸಮುದಾಯವು ಪತ್ರಕರ್ತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.

ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಕಳೆದ ಡಿಸೆಂಬರ್‍ನಲ್ಲಿ ವಾ ಲೋನ್(32) ಹಾಗೂ ಕ್ಯಾವ್ ಸೊಯಿ(38) ಅವರನ್ನು ಬಂಧಿಸಿ ಯಾನ್‍ಗೊನ್‍ನ ಇನಸೀನ್ ಬಂದೀಖಾನೆಯಲ್ಲಿ ಇರಿಸಲಾಗಿತ್ತು. ಡ್ರಾಕೋನಿಯನ್-ಬ್ರಿಟಿಷ್ ವಸಾಹತು ಕಾಲದ ಈ ಕಾನೂನು ಅಡಿ ಈಗ ಇವರಿಗೆ ತಲಾ ಏಳು ವರ್ಷಗಳ ಜೈಲು ಶಿಕ್ಷೆ ಘೋಷಿಸಲಾಗಿದೆ.

ಮ್ಯಾನ್ಮಾರ್‍ನ ರೋಖೈನ್ ರಾಜ್ಯದಲ್ಲಿ ಅಲ್ಪಸಂಖ್ಯಾತ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ದೌರ್ಜನ್ಯ, ಹಿಂಸಾಚಾರ ಮತ್ತು ಹತ್ಯಾಕಾಂಡದ ಬಗ್ಗೆ ವಾ ಮತ್ತು ಕ್ಯಾವ್ ವರದಿ ಮಾಡಿದ್ದರು.

Facebook Comments

Sri Raghav

Admin