ಈಶಾನ್ಯ ಪ್ರಾಂತ್ಯದಲ್ಲಿ ಜಲಪ್ರಳಯ : ನಾಗಾಲ್ಯಾಂಡ್‍ನಲ್ಲಿ 14 ಬಲಿ, 400 ಗ್ರಾಮಗಳು ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Nagaland--01

ಕೊಹಿಮಾ, ಸೆ.3-ದಕ್ಷಿಣ ಭಾರತದ ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾದ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದ ನಂತರ ಈ ಈಶಾನ್ಯ ಪ್ರಾಂತ್ಯದಲ್ಲಿ ವಿನಾಶಕಾರಿ ಜಲಪ್ರಳಯವಾಗುತ್ತಿದೆ. ನಾಗಾಲ್ಯಾಂಡ್‍ನಲ್ಲಿ ಭಾರೀ ವರ್ಷಧಾರೆಯಿಂದ ಈವರೆಗೆ 14 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು ಸಹಸ್ರಾರು ಮಂದಿ ಸಂತ್ರಸ್ತರಾಗಿದ್ದಾರೆ.

ನಾಗಾಲ್ಯಾಂಡ್‍ನ ಹಲವು ಭಾಗಗಳಲ್ಲಿ ನೆರೆ ಹಾವಳಿ ಮತ್ತು ಭೂಕುಸಿತದಿಂದ ಕನಿಷ್ಟ 14 ಮಂದಿ ಸಾವಿಗೀಡಾಗಿದ್ದಾರೆ. 400ಕ್ಕೂ ಹೆಚ್ಚು ಗ್ರಾಮಗಳ ಸುಮಾರು 3,000 ಕುಟುಂಬಗಳು ನಿರಾಶ್ರಿತವಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾಳೆ. ನಾಗಾಲ್ಯಾಂಡ್‍ನ ಬಹುತೇಕ ಎಲ್ಲ ನದಿಗಳು ಮತ್ತು ಉಪನದಿಗಳು ಪ್ರವಾಹದಿಂದ ಭೋರ್ಗರೆಯುತ್ತಿದ್ದು, ಪರ್ವತಮಯ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿವೆ. ಈ ದುರ್ಘಟನೆಗಳಲ್ಲಿ ಅನೇಕರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.  ನೆರೆ ಹಾವಳಿಯಿಂದ ಸಾವು-ನೋವು ಸಂಭವಿಸಿರುವ ಬಗ್ಗೆ ಆತಂಕ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೋ ಸಂತ್ರಸ್ತರ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Nagaland--02

# ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಪ್ರವಾಹ :
ಈಶಾನ್ಯ ಪ್ರಾಂತ್ಯದ ಸಪ್ತ ಸಹೋದರಿ ರಾಜ್ಯಗಳ ಭಾಗವಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲೂ ಭಾರೀ ಮಳೆ ಮತ್ತು ಪ್ರವಾಹದಿಂದ ಸಾವು-ನೋವಿನ ವರದಿಯಾಗಿವೆ. ಬ್ರಹ್ಮಪುತ್ರ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಲಾನಯನ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಾಲ್ಲಿ ಮುಂದುವರಿದಿದೆ.

Facebook Comments

Sri Raghav

Admin