ತುಮಕೂರು ಪಾಲಿಕೆ ಅತಂತ್ರ : ಬಿಜೆಪಿಗೆ 12, ಜೆಡಿಎಸ್ 11, ಕಾಂಗ್ರೆಸ್ 9

ಈ ಸುದ್ದಿಯನ್ನು ಶೇರ್ ಮಾಡಿ

Tumakuru-mahanagara-Palike

ತುಮಕೂರು, ಸೆ.3- ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿಸಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಬಿಜೆಪಿ ಅತಿ ಹೆಚ್ಚು 12 ಸ್ಥಾನಗಳನ್ನು ಪಡೆದರೂ ಅಧಿಕಾರದ ಗದ್ದುಗೆಗೇರಲು ಸಾಧ್ಯವಾಗಿಲ್ಲ. ಒಟ್ಟು 35 ವಾರ್ಡ್‍ಗಳ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 12, ಜೆಡಿಎಸ್ 11, ಕಾಂಗ್ರೆಸ್ 9 ಹಾಗೂ ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 17 ಸ್ಥಾನಗಳನ್ನು ಪಡೆಯಬೇಕಾಗಿದ್ದು, ಯಾರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಇಲ್ಲಿ ಮೈತ್ರಿ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇರುವುದರಿಂದ ಇಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.  [ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ LIVE UPDATES ]

ತುಮಕೂರು ನಗರ ಸಭೆ ಇದ್ದಾಗಲೂ ಇಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ರಚಿಸಿ ಸರ್ಕಾರ ರಚಿಸಿದ್ದು, ಜಿಲ್ಲೆಯಲ್ಲಿ ಒಟ್ಟು ಮೂರು ಸಚಿವರಿದ್ದು, . ಕಾಂಗ್ರೆಸ್‍ನಿಂದ ಇಬ್ಬರು, ಜೆಡಿಎಸ್‍ನಿಂದ ಒಬ್ಬರು ಸಚಿವರಿದ್ದ ತಮ್ಮ ಪಕ್ಷವನ್ನು ಗೆಲ್ಲಿಸಲು ಅಹರ್ನಿಶಿ ಶ್ರಮಿಸಿದ್ದರು. ಆದರೆ ಮತದಾರ ಪ್ರಭು ಯಾರಿಗೂ ಬಹುಮತ ನೀಡದೆ ಅತಂತ್ರ ಫಲಿತಾಂಶ ನೀಡಿದ್ದಾನೆ. ಮಧುಗಿರಿ ಪುರಸಭೆ ಕಾಂಗ್ರೆಸ್ ಮಾನ ಉಳಿಸಿದರೆ, ಕೊರಟಗೆರೆಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ತಲುಪಿದೆ. ಮೈತ್ರಿಯಿಂದ ಲಾಭವಾಗುತ್ತದೆ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ಮುಖಭಂಗವಾಗಿದೆ.
ಪಾಲಿಕೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಪರಮೇಶ್ವರ್, ಮಾಜಿ ಶಾಸಕ ರಫೀಕ್ ಅಹ್ಮದ್ ಮತ್ತು ಇತರ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಜನರು 9 ಸ್ಥಾನಕ್ಕೆ ಕಾಂಗ್ರೆಸ್ಸನ್ನು ಸೀಮಿತಗೊಳಿಸಿದ್ದಾರೆ. ಇನ್ನು ಜಿಲ್ಲಾ ಬಿಜೆಪಿ ಉಸ್ತುವಾರಿಯನ್ನು ವಿ.ಸೋಮಣ್ಣ ವಹಿಸಿಕೊಂಡಿದ್ದರು. ಪಾಲಿಕೆಯನ್ನು ಬಿಜೆಪಿ ತೆಕ್ಕೆಗೆ ತರಲು ಸಾಕಷ್ಟು ಶ್ರಮಿಸಿದ್ದರು.  ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಚೆನ್ನಿಗಪ್ಪ ಮತ್ತು ಗ್ರಾಮಾಂತರ ಕ್ಷೇತ್ರದ ಡಿ.ಸಿ.ಗೌರಿಶಂಕರ್, ಗೋವಿಂದ ರಾಜು ಮತ್ತಿತರ ಘಟಾನುಘಟಿಗಳು ಕೂಡ ಶ್ರಮಿಸಿದ್ದರು. ಒಟ್ಟಾರೆ ಯಾವುದೇ ಪಕ್ಷಕ್ಕೂ ಗದ್ದುಗೆ ಅಲಂಕರಿಸಲು ಸಾಧ್ಯವಾಗಿಲ್ಲ.

ಗೆದ್ದ ಅಭ್ಯರ್ಥಿಗಳು 
ಮೊದಲನೇ ವಾರ್ಡ್ ಬಿಜೆಪಿಯ ನಳಿನಿ ಇಂದ್ರಕುಮಾರ್, 2ನೆ ವಾರ್ಡ್ ಬಿಜೆಪಿ ಮಂಜುನಾಥ್, 3ನೆ ವಾರ್ಡ್ ಜೆಡಿಎಸ್ ಲಕ್ಷ್ಮೀ ನರಸಿಂಹರಾಜು, 4ನೇ ವಾರ್ಡ್ ಬಿಜೆಪಿಯ ದೀಪಾಶ್ರೀ ಮಹೇಶ್ ಬಾಬು, 5ನೆ ವಾರ್ಡ್ ಕಾಂಗ್ರೆಸ್ ಮಹೇಶ್, 6ನೆ ವಾರ್ಡ್‍ನ ಬಿಜೆಪಿಯ ವೀಣಾ, 7ರಲ್ಲಿ ಕಾಂಗ್ರೆಸ್‍ನ ಡಿ.ಕುಮಾರ್, 8ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ನಯಾಜ್ ಅಹ್ಮದ್, 9ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಪ್ರಭಾವತಿ ಸುದೀಶ್ವರ್, 10ನೆ ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ನೂರುನ್ನಿಸಾ ಬಾನು, 11ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಎಂ.ಕೆ ಮನು, 12ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಅಹ್ಮದ್ ಶರೀಫ್, 13ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಫರೀದಾ ಬೇಗಂ, 14ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ನಾಜಿರ ಬಾನು, 15ನೆ ವಾರ್ಡ್‍ನಲ್ಲಿ ಬಿಜೆಪಿಯ ಗಿರಿಜಾ ಧನ್ಯಕುಮಾರ, 16ನೇ ವಾರ್ಡ್‍ನ ಕಾಂಗ್ರೆಸ್ ಇನಾಯತುಲ್ಲಾ ಖಾನ್, 17ನೇ ವಾರ್ಡನಲ್ಲಿ ಜೆಡಿಎಸ್‍ನಿಂದ ಮಂಜುನಾಥ್, 18ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಮುಜೀದಾ ಖಾನಂ, 19ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ರೂಪಾಶ್ರೀ, 20ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಎ.ಶ್ರೀನಿವಾಸ್, 21ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಲಲಿತಾ ರವೀಶ್, 22ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ರವಿಕುಮಾರ್, 23ನೇ ವಾಡ್‍ನಲ್ಲಿ ಜೆಡಿಎಸ್‍ನಿಂದ ನರಸಿಂಹಮೂರ್ತಿ, 24ನೇ ವಾರ್ಡನಲ್ಲಿ ಪಕ್ಷೇತರ ಅಭ್ಯರ್ಥಿ ಸಿದ್ದರಾಮಯ್ಯ, 25ನೆ ವಾರ್ಡ್‍ನಲ್ಲಿ ಬಿಜೆಪಿ ಚರಿತ್ರಾ ಉಮಾಶಂಕರ್, 26ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಮಲ್ಲಿಕಾರ್ಜುನಯ್ಯ, 27ನೇ ವಾರ್ಡನಲ್ಲಿ ಬಿಜೆಪಿಯ ಚಂದ್ರಕಲಾ, 28ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಧರಣೇಂದ್ರ ಕುಮಾರ್, 29ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ನಾಜಿಮಾಬಿ, 30ನೆ ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ವಿಷ್ಣುವರ್ಧನ್, 31ನೇ ವಾರ್ಡ್‍ನಲ್ಲಿ ಬಿಜೆಪಿಯ ಪಿ.ಎಂ.ರಮೇಶ್, 32ನೇ ವಾರ್ಡ್‍ನಲ್ಲಿ ಬಿಜೆಪಿಯ ಬಿ.ಜಿ.ಕೃಷ್ಣಪ್ಪ, 33ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಶಶಿಕಲಾ, 34ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಅರುಣ್, 35ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ನಿರ್ಮಲಾ ಶಿವಕುಮಾರ್ ಆಯ್ಕೆಯಾಗಿದ್ದಾರೆ.

Facebook Comments

Sri Raghav

Admin