ಪಾಕ್’ಗೆ ಶಾಕ್ ಮೇಲೆ ಶಾಕ್ ಕೊಟ್ಟ ಅಮೇರಿಕ..!

ಈ ಸುದ್ದಿಯನ್ನು ಶೇರ್ ಮಾಡಿ

Trump--01
ವಾಷಿಂಗ್ಟನ್, ಸೆ.3 (ಪಿಟಿಐ)- ಹಖ್ಖಾನಿ ಜಾಲ ಸೇರಿದಂತೆ ಎಲ್ಲ ಭಯೋತ್ಪಾದಕ ಗುಂಪುಗಳನ್ನು ನಿರ್ದಾಕ್ಷಿಣ್ಯವಾಗಿ ನಿಗ್ರಹಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ತಾಕೀತು ಮಾಡಿದೆ. ಉಗ್ರರ ನಿಗ್ರಹದಲ್ಲಿ ಮುಂದುವರಿದ ಪಾಕಿಸ್ತಾನದ ನಿರಾಸಕ್ತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ 300 ದಶಲಕ್ಷ ಡಾಲರ್ ಸೇನಾ ನೆರವಿಗೆ ಅಮೆರಿಕ ಕತ್ತರಿ ಹಾಕಿದ ಬೆನ್ನಲ್ಲೇ ಇಸ್ಲಾಮಾಬಾದ್ ಮೇಲೆ ವಾಷಿಂಗ್ಟನ್ ಮತ್ತಷ್ಟು ಒತ್ತಡ ಹೇರುತ್ತಿದೆ.  ಸಮ್ಮಿಶ್ರ ಸಹಕಾರ ನಿಧಿ(ಸಿಎಸ್‍ಎಫ್)ಯ ಸವಿವರವನ್ನು ಇತ್ತೀಚಿನ ವರದಿಗಳಲ್ಲಿ ಪಾಕ್ ವಿರೂಪಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ರಕ್ಷಣಾ ಇಲಾಖೆ-ಪೆಂಟಗನ್‍ನ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಫೌಲ್ಕ್‍ನೆರ್, ಪಾಕಿಸ್ತಾನಕ್ಕೆ ಸೇನಾ ನೆರವು ಕಡಿತಗೊಳಿಸುವ ಬಗ್ಗೆ ಈ ವರ್ಷದ ಜನವರಿಯಲ್ಲೇ ನಿಧರಿಸಲಾಗಿತ್ತು ಎಂದು ತಿಳಿಸಿದರು.

ಈ ಹಿಂದೆ ಅಮೆರಿಕ ಸರ್ಕಾರ ಕೈಗೊಂಡ ನಿರ್ಧಾರವನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ. ಇದು ಹೊಸ ತೀರ್ಮಾನ ಅಥವಾ ನೂತನ ಘೋಷಣೆ ಅಲ್ಲ.
ಆದರೆ ಪಾಕಿಸ್ತಾನವು ಉಗ್ರರನ್ನು ಸದೆಬಡಿಯಲು ತೋರುತ್ತಿರುವ ನಿರ್ಲಕ್ಷತೆ ತೀವ್ರ ಅಸಮಾಧಾನ ಮೂಡಿಸಿದೆ ಎಂದು ಅವರು ಹೇಳಿದರು.

ಹಖ್ಖಾನಿ ಭಯೋತ್ಪಾದಕರ ಜಾಲ ಸೇರಿದಂತೆ ಎಲ್ಲ ಉಗ್ರಗಾಮಿ ಸಂಘಟನೆಗಳು ಹಾಗೂ ಉಗ್ರರನ್ನು ಮುಲಾಜಿಲ್ಲದೇ ಪಾಕಿಸ್ತಾನ ನಿಗ್ರಹಿಸಬೇಕೆಂಬುದು ನನ್ನ ಆಗ್ರಹ. ಇದೇ ಮಾತನ್ನೇ ನಾವು ಈಗಲೂ ಹೇಳುತ್ತಿದ್ದೇವೆ ಎಂದು ಅವರು ಹೇಳಿದರು.

Facebook Comments

Sri Raghav

Admin